ಅಗ್ನಿಪಥ್ ಪ್ರತಿಭಟನೆಗಳಿಂದ ರೈಲ್ವೆಗೆ ಆದ ನಷ್ಟ 259.44 ಕೋಟಿ ರೂ.: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

Prasthutha|

ಹೊಸದಿಲ್ಲಿ: ಸೇನಾ ಪಡೆಗಳಿಗೆ ನೇಮಕಾತಿಗಾಗಿ ಕೇಂದ್ರ ಸರಕಾರ ಘೋಷಿಸಿದ ಅಗ್ನಿಪಥ್ ಯೋಜನೆಯು ಅಸಂಬದ್ಧ ಮತ್ತು ಅನ್ಯಾಯ ಎಂದು ಅದರ ವಿರುದ್ಧ ನಡೆದ ಭಾರಿ ಪ್ರತಿಭಟನೆಗಳ ವೇಳೆ ಭಾರತೀಯ ರೈಲ್ವೆಗೆ ಭರ್ಜರಿ ನಷ್ವವಾಗಿದ್ದು, ನಷ್ಟ ಮೌಲ್ಯ ರೂ. 259.44 ಕೋಟಿ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

- Advertisement -


ಆ ವೇಳೆ ರೈಲುಗಳಿಗೆ ಬೆಂಚಿ ಹಚ್ಚಲಾಗಿತ್ತು. ದೇಶಾದ್ಯಂತ ಜೂನ್ 15 ರಿಂದ ಜೂನ್ 23ರ ನಡುವೆ 2,132 ರೈಲುಗಳನ್ನು ರದ್ದುಪಡಿಸಲಾಗಿತ್ತು ಎಂದೂ ಸಚಿವರು ತಿಳಿಸಿದ್ದಾರೆ.

ಜೂನ್ 14 ರಿಂದ ಜೂನ್ 30ರ ನಡುವೆ ರೈಲು ರದ್ದತಿ ಹಿನ್ನೆಲೆಯಲ್ಲಿ ಅಂದಾಜು ರೂ 102.96 ಕೋಟಿ ಮರುಪಾವತಿ ಮಾಡಲಾಗಿದೆ ಎಂದು ಹೇಳಿದರು. ಪ್ರತಿಭಟನೆಗಳಿಂದ ರೈಲುಗಳು ರದ್ದಾದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ನೀಡಲಾದ ಮರುಪಾವತಿ ಕುರಿತಂತೆ ಪ್ರತ್ಯೇಕ ಮಾಹಿತಿ ಇಲ್ಲ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

Join Whatsapp