ರೈಲು ಬಜೆಟ್ ನಾಲ್ಕು ಪಟ್ಟು ಏರಿಕೆ, ಖೋತಾ ಉಳಿಕೆ

Prasthutha|

ನವದೆಹಲಿ: ಬಜೆಟ್’ನೊಳಗಿರುವ ರೈಲು ಬಜೆಟ್ ದಶಕದಲ್ಲೇ ಅತಿ ದೊಡ್ಡದಾಗಿದ್ದು, ಕಳೆದ ಬಾರಿಗಿಂತ ರೈಲು ಇಲಾಖೆಗೆ ಈ ಬಾರಿ ನಾಲ್ಕು ಪಟ್ಟು ಹೆಚ್ಚು ಎಂದರೆ ರೂ. 2.4 ಲಕ್ಷ ಕೋಟಿ ಒದಗಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

- Advertisement -


2013-14ರ ಕೊನೆಯ ಯುಪಿಎ ರೈಲು ಬಜೆಟ್’ಗಿಂತ ಒಂಬತ್ತು ಪಟ್ಟು ಹೆಚ್ಚು ಒದಗಿಸಲಾಗಿದ್ದು, ವಿವದ್ ಸೆ ವಿಶ್ವಾಸ್-2 ನಿರ್ಮಲಾ ಸೀತಾರಾಮನ್ ಘೋಷಿಸಿದ ಯೋಜನೆಯಾಗಿದ್ದು ಉದ್ಯಮ ಮತ್ತು ಹಣಕಾಸು ವಿವಾದಗಳಿಗೆ ಒಂದು ಹೆಜ್ಜೆಯ ಪರಿಹಾರವನ್ನು ಈ ಹಾದಿಯಲ್ಲಿ ಪಡೆಯಬಹುದು ಎಂದು ಅವರು ಹೇಳಿದರು.


ಹಸಿರು ಇಂಧನದ ಗುರಿಯಂತೆ 2030ಕ್ಕೆ ಭಾರತವು ಗ್ರೀನ್ ಹೈಡ್ರೋಜನ್ ಉತ್ಪಾದನೆಯನ್ನು 5ಎಂಟಿ ಮುಟ್ಟಿಸಲಾಗುವುದು ಎಂದೂ ಹಣಕಾಸು ಸಚಿವರು ಹೇಳಿದರು.
ಸದರಿ ಆರ್ಥಿಕ ವರ್ಷದಲ್ಲಿನ ಹಣಕಾಸು ಕೊರತೆ 6.4% ಕೊರತೆಯನ್ನು ಹಾಗೇ ಮುಂದುವರಿಸಿಕೊಂಡು ಹೋಗಲಾಗುವುದು ಹಾಗೂ ಮುಂದಿನ ಹಣಕಾಸು ವರ್ಷದಲ್ಲಿ ಅದನ್ನು ಜಿಡಿಪಿಯ 5.9%ಕ್ಕೆ ಇಳಿಸಲಾಗುವುದು ಎಂದೂ ಅರ್ಥ ಸಚಿವೆ ತಿಳಿಸಿದರು.

Join Whatsapp