ಮದ್ಯದ ಅಂಗಡಿಗಳನ್ನು ಗೋಶಾಲೆಗಳಾಗಿ ಪರಿವರ್ತಿಸಬೇಕು: ಉಮಾಭಾರತಿ

Prasthutha|

ಭೋಪಾಲ್: ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳಕ್ಕೆ ಮದ್ಯ ಸೇವನೆಯೇ ಕಾರಣ. ಆದ್ದರಿಂದ ಮಧ್ಯಪ್ರದೇಶದ ಮದ್ಯದ ಅಂಗಡಿಗಳನ್ನು ಗೋಶಾಲೆಗಳಾಗಿ ಪರಿವರ್ತಿಸಬೇಕು ಎಂದು ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಆಗ್ರಹಿಸಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಮದ್ಯದಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸಲು ಮುಂದಾಗುತ್ತೇನೆ. ರಾಜ್ಯದಲ್ಲಿ ನಿಯಂತ್ರಿತ ಮದ್ಯ ನೀತಿಯ ಬೇಡಿಕೆಯನ್ನು ಬೆಂಬಲಿಸುವ ಸಲುವಾಗಿ ಮದ್ಯ ಮಾರಾಟ ಕೇಂದ್ರಗಳಲ್ಲಿ ಗೋಶಾಲೆಗಳು ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.

Join Whatsapp