ಮಧ್ಯಮ ವರ್ಗದವರ ಬೇಡಿಕೆ ಈಡೇರಿಕೆ: ನಿರ್ಮಲಾ ಸೀತಾರಾಮನ್

Prasthutha|

ನವದೆಹಲಿ: ಆದಾಯ ತೆರಿಗೆ ಮಿತಿ ಏರಿಸಿರುವುದು ಮಧ್ಯಮ ವರ್ಗದವರಿಗೆ ದೊರೆತಿರುವ ಮುಖ್ಯವಾದ ನಿಟ್ಟುಸಿರು ಎಂದಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅವರು ಮಧ್ಯಮ ವರ್ಗದವರ ಬೇಡಿಕೆಗಳಲ್ಲಿ 5 ಮುಖ್ಯ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದರು.

- Advertisement -


ಉದ್ಯೋಗ ಸೃಷ್ಟಿ ಮಧ್ಯಮ ವರ್ಗದವರ ಮುಖ್ಯ ಬೇಡಿಕೆಯಾಗಿದೆ. ಸಾಂಕ್ರಾಮಿಕವು ಮಧ್ಯಮ ವರ್ಗದ ಹಲವರ ಕಸುಬು ಕಸಿದುಕೊಂಡಿದೆ. ಈ ಬಜೆಟ್ ಮೂಲಕ ಸರಕಾರವು ಉತ್ಪಾದನಾ ಕ್ಷೇತ್ರ, ತಂತ್ರಜ್ಞಾನ ಮತ್ತು ಸಂರಚನಾ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುತ್ತದೆ ಎಂದು ಸೀತಾರಾಮನ್ ತಿಳಿಸಿದರು.


ಸೆಕ್ಷನ್ 80 ಡಿ ಪ್ರಕಾರ ಆರೋಗ್ಯ ವಿಮೆ ಜಮಾವನ್ನು ಹೆಚ್ಚಿಸುವಂತೆ ಮಧ್ಯಮ ವರ್ಗದವರು ದೀರ್ಘ ಕಾಲದಿಂದ ಬೇಡಿಕೆ ಇಟ್ಟಿದ್ದರು. ಈಗ ಆರೋಗ್ಯ ವಿಮೆಯಿಂದಾಗುವ ಬಿಲ್ ಕಡಿತವನ್ನು ರೂ. 25,000ದಿಂದ 50,000ಕ್ಕೆ ಏರಿಸಲಾಗಿದೆ ಎಂದು ಅವರು ತಿಳಿಸಿದರು.

- Advertisement -


ಜೀವ ವಿಮೆ ಮತ್ತು ಆರೋಗ್ಯ ವಿಮೆಗಳು ಜಿಎಸ್’ಟಿ- ಸರಕು ಸೇವಾ ತೆರಿಗೆ ಹೊಂದಿರಬಾರದು ಎನ್ನುವುದು ಇನ್ನೊಂದು ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ರೂಪಿಸಿರುವುದಾಗಿ ಅವರು ಹೇಳಿದರು.


ಮಕ್ಕಳ ಸಂಚಾರಿ ಟ್ಯೂಶನ್ ಫೀಸ್ ಗೆ 80 ಸಿ ಅಡಿ ಪ್ರತ್ಯೇಕ ಆಯ್ಕೆ ಇರುವಂತೆ ಬೇಡಿಕೆ ಇಡಲಾಗಿತ್ತು. ಆದಾಯ ತೆರಿಗೆ ಕಡಿತ ಸಹಿತ ಹಲವು ಹೊಸ ನಿಯಮಗಳು ಅದಕ್ಕೆ ಪೂರಕ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Join Whatsapp