ನಕಲಿ ಕಾಲ್ ಸೆಂಟರ್ ಗಳ ಮೇಲೆ ದಾಳಿ: ಗುಜರಾತ್ ನ 6 ಮಂದಿ ಬಂಧನ

Prasthutha|

►ನಗದು ಸೇರಿ 1.47 ಕೋಟಿ ರೂ.ಮೌಲ್ಯದ ವಸ್ತುಗಳ ವಶ

- Advertisement -

ಬೆಂಗಳೂರು: ನಕಲಿ ಕಾಲ್ ಸೆಂಟರ್ ಗಳ ಮೇಲೆ ದಾಳಿ ನಡೆಸಿದ ಮಹದೇವಪುರ ಪೊಲೀಸರು, ಗುಜರಾತ್ ನ 6 ಮಂದಿ ಆರೋಪಿಗಳನ್ನು ಬಂಧಿಸಿ 15 ಲಕ್ಷ ನಗದು 1 ಕೋಟಿ ಮೌಲ್ಯದ 132 ಡೆಸ್ಕ್ ಟಾಪ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್ ನ ರಿಷಿವ್ಯಾಸ್ (29), ಪ್ರತೀಕ್ (27), ಪರಿಕ್ ಬೀರನ್ (26) ಹೇತ್ ಪಟೇಲ್ (28), ಕರಣ್ ಲಾಡನ್ (32) ಹಾಗೂ ಸೈಯದ್ ಇಬ್ರಾತ್ (27) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.

- Advertisement -

ಕಳೆದ ಜು. 7 ರಂದು ಮಹದೇವಪುರದ ಇಪಿಐಪಿ ಏರಿಯಾದ 1ನೇ ಹಂತದ , ಸಿಲ್ವರ್ ಸಾಫ್ಟ್ ಟೆಕ್ ಪಾರ್ಕ್ ನ 3ನೇ ಮಹಡಿಯಲ್ಲಿ ಏಥಿಕಲ್ ಇನ್ ಫೋ ಕಂ ಪ್ರೈ.ಲಿ. ಕಂಪನಿಯಲ್ಲಿ ನಕಲಿ ಕಾಲ್ ಸೆಂಟರ್ ಅನ್ನು ನಡೆಸುತ್ತಾ ಕಂಪ್ಯೂಟರ್ ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಅಂತರ್ಜಾಲ ಹಾಗೂ ದೂರವಾಣಿ ಮೂಲಕ ವಿದೇಶಗಳಲ್ಲಿರುವ ಸಾರ್ವಜನಿಕರನ್ನು ಸಂಪರ್ಕಿಸಿ ಸುಳ್ಳು ಹೇಳಿ ನಂಬಿಸಿ ಬ್ಯಾಂಕ್ ಖಾತೆಗಳ ಇತರೆ ವಿವರಗಳನ್ನು ಪಡೆದು ಸಾರ್ವಜನಿಕರಿಂದ ಹಣವನ್ನು ಲಪಟಾಯಿಸಿ ಮೋಸ ಮಾಡುತ್ತಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ.

ಕೂಡಲೇ ಕಾರ್ಯಾಚರಣೆ ಕೈಗೊಂಡ ಮಹದೇವಪುರ ಹಾಗೂ ಸೆನ್ ವೈಟ್ಫೀಲ್ಡ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡಂತೆ ಒಂದು ತಂಡಗಳು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮೇಲ್ಕಂಡ ಕಾಲ್ ಸೆಂಟರ್ ದಾಳಿ ಮಾಡಿ ಗುಜರಾತ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಅವರು ತಿಳಿಸಿದರು.

 ಡಿಸಿಪಿ ಗಿರೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Join Whatsapp