ತೀವ್ರ ಮಳೆ ಹಿನ್ನೆಲೆ: ವಿಕೋಪ ಪರಿಹಾರಕ್ಕೆ ಎಸ್ ಡಿಪಿಐ ನಿಯೋಗದಿಂದ ಮುಖ್ಯಮಂತ್ರಿಗೆ ಮನವಿ

Prasthutha|

ಉಳ್ಳಾಲ: ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ವೀಕ್ಷಿಸಲು ಉಳ್ಳಾಲಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮೂಲಕ ಎಸ್ ಡಿಪಿಐ ನಿಯೋಗದಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

- Advertisement -

ಉಳಾಲ ನಗರ ಸಭೆ ವ್ಯಾಪ್ತಿಯಲ್ಲಿ ಕಡಲ್ಕೊರೆತ, ಬಿರುಗಾಳಿ, ನೆರೆಗೆ ಹಲವು ವಸತಿ ಪ್ರದೇಶಗಳು ಪದೇ ಪದೇ ಹಾನಿಗೊಳಗಾಗುತ್ತಿವೆ. ಸಮುದ್ರ ಮತ್ತು ನದಿ ತಟದಲ್ಲಿರುವ ಮನೆಗಳನ್ನು ಗಟ್ಟಿಮುಟ್ಟಾಗಿ ದುರಸ್ತಿ ಮಾಡಲು ಕನಿಷ್ಠ 1 ಲಕ್ಷ ರೂಪಾಯಿ ಪರಿಹಾರವನ್ನು ಎಲ್ಲಾ ಮನೆಗಳಿಗೆ ನೀಡಬೇಕು. ವಸತಿ ಹೀನರಿಗೆ ಮೀಸಲಿಟ್ಟ 1 ಎಕ್ರೆ, 40 ಸೆಂಟ್ಸ್  ಜಾಗವನ್ನು ವಸತಿ ರಹಿತ ಕುಟುಂಬಗಳಿಗೆ ಕೂಡಲೇ ಮಂಜೂರು ಮಾಡಬೇಕು. ಆರು ಕೋಟಿ ರೂಪಾಯಿ ಸಾಲದಲ್ಲಿರುವ ನಗರಸಭೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿ 5-6 ವರ್ಷಗಳಿಂದ ಕಂಟ್ರಾಕ್ಟರುಗಳಿಗೆ ಬಾಕಿಯಾಗಿರುವ ಸಾಲ ತೀರಿಸಬೇಕು. ನಗರಸಭೆಗೆ ತುರ್ತಾಗಿ ಸಿಬ್ಬಂದಿಗಳ ನೇಮಕ ಮಾಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಯಿತು.

ಉಳ್ಳಾಲ ಕಡಲ್ಕೊರೆತ ಮತ್ತು ಮಳೆಹಾನಿ ವೀಕ್ಷಿಸಲು ಸಚಿವರಾದ ಆರ್.ಅಶೋಕ್, ಎಸ್. ಅಂಗಾರ ಮತ್ತು ಸುನಿಲ್ ಕುಮಾರ್ ಆಗಮಿಸಿದ್ದರು. ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ವಿವಿಧ ರಾಜಕೀಯ ಪಕ್ಷಗಳ ನಾಯಕರು , ಕೌನ್ಸಿಲರ್ ಗಳು ಉಪಸ್ಥಿತರಿದ್ದರು.

- Advertisement -

ಎಸ್ ಡಿಪಿಐ ನಿಯೋಗದಲ್ಲಿ ಕೌನ್ಸಿಲರ್ ಅಸ್ಗರ್ ಅಲಿ, ಮುಖಂಡರಾದ ಅಕ್ರಮ್ ಹಸನ್, ಅವೂಫ್ ಹಳೆಕೋಟೆ, ಇಕ್ಬಾಲ್ ಕೋಟೆಪುರ, ನಿಝಾಮ್ ಮೇಲಂಗಡಿ ಉಪಸ್ಥಿತರಿದ್ದರು.

Join Whatsapp