ರಾಹುಲ್ ಸದಸ್ಯತ್ವ ಅನರ್ಹ: ದೇಶದಲ್ಲಿ ಪ್ರಜಾಪ್ರಭುತ್ವದ ಅವನತಿಯಾಗುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಸ್ಪಷ್ಟ ಉದಾಹರಣೆ ಬೇರೇನೂ ಬೇಕೆ?- ಇಲ್ಯಾಸ್ ಮುಹಮ್ಮದ್

Prasthutha|

ಬೆಂಗಳೂರು: ಕಾಂಗ್ರೆಸ್ ರಾಹುಲ್ ಗಾಂಧಿಯವರ ಸದಸ್ಯತ್ವ ಅನರ್ಹಗೊಳಿಸಿರುವುದು ಭಾರತದಲ್ಲಿ ಪ್ರಜಾಪ್ರಭುತ್ವದ ಅವನತಿಯಾಗುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಸ್ಪಷ್ಟ ಉದಾಹರಣೆ ಬೇರೇನೂ ಬೇಕೆ?. ಪ್ರಭುತ್ವವು ಸರ್ವಾಧಿಕಾರದ ಹಾದಿಯಲ್ಲಿ ಅಹಂಕಾರ ಮೆರೆಯುತ್ತಿದೆ. ಮೊನ್ನೆ ಪ್ರತಿಪಕ್ಷ ಸದಸ್ಯರ ಧ್ವನಿವರ್ಧಕವನ್ನು ಕಡಿದವರು ಇಂದು ಲೋಕಸಭಾ ಸದಸ್ಯತ್ವವನ್ನು ಕಡಿದಿದ್ದಾರೆ. ಸರ್ವಾಧಿಕಾರಕ್ಕೆ ದಿಕ್ಕಾರ ಎಂದು ಎಸ್’ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ ಸದಸ್ಯತ್ವ ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದು ಭಾರತದಲ್ಲಿ ಪ್ರಜಾಪ್ರಭುತ್ವದ ಅವನತಿಯಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಸೂಚನೆಯಾಗಿದೆ ಎಂದು ಹೇಳಿದ್ದಾರೆ.

- Advertisement -