ರಾಹುಲ್ ನಾಯಕತ್ವದಲ್ಲಿ ದೇಶದ ರಾಜಕೀಯ ಬದಲಾವಣೆ: ಸಂಜಯ್ ರಾವುತ್

Prasthutha|

- Advertisement -

ಮುಂಬೈ: ರಾಹುಲ್ ಗಾಂಧಿಯವರ ನಾಯಕತ್ವ ಕಳೆದ ವರ್ಷದಂತೆ ಈ ವರ್ಷವೂ ಮುಂದುವರಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ರಾಜಕೀಯ ಹೊಸ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ರೋಖ್ಥೋಕ್‌ ನಲ್ಲಿ ಬರೆದುಕೊಂಡಿರುವ ಅವರು, ರಾಹುಲ್ ಗಾಂಧಿ ಅವರು 2023ರಲ್ಲಿ ಉತ್ತಮ ನಾಯಕತ್ವಕ್ಕೆ ಬುನಾದಿ ಹಾಕಿದ್ದಾರೆ ಎಂದರು.

- Advertisement -

ಮೋದಿ, ಅಮಿತ್ ಶಾ ಅವರು ದೇಶದಲ್ಲಿ ದ್ವೇಷ, ವಿಭಜನೆಯ ಬೀಜ ಬಿತ್ತಬಾರದು. ರಾಮ ಮಂದಿರ ವಿವಾದ ಮುಗಿದಿರುವುದರಿಂದ ಬಿಜೆಪಿಗೆ ಈ ವಿಚಾರವನ್ನಿಟ್ಟುಕೊಂಡು ಮತ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಲವ್ ಜಿಹಾದ್‌ ಅಸ್ತ್ರವನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದವರು ಕಿಡಿ ಕಾರಿದರು.