ಹೊಸ ಪಕ್ಷದ ಬಾವುಟ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ ಪತ್ನಿ

Prasthutha|

- Advertisement -

ಬಳ್ಳಾರಿ: ಹೊಸವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕೆಆರ್​ ಪಿ‌ ಪಕ್ಷದ ಬಾವುಟವನ್ನು ಇಂದು‌ ಅಧಿಕೃತವಾಗಿ‌ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬಿಡುಗಡೆಗೊಳಿಸಿದ್ದಾರೆ.

ಬೆಣಕಲ್ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರುಣಾ ಲಕ್ಷ್ಮಿ ಪಕ್ಷದ ಬಾವುಟವನ್ನು ಬಿಡುಗಡೆ ಮಾಡಿದರು. ಹಸ್ತಲಾಘವ ಹೊಂದಿರುವ ಸಹಕಾರ ಮಾದರಿಯ ಚಿಹ್ನೆಯನ್ನು ಬಾವುಟದಲ್ಲಿ ಬಳಕೆ ಮಾಡಲಾಗಿದೆ.

- Advertisement -

ಬಳಿಕ ಮಾತನಾಡಿದ ಅರುಣಾ ಲಕ್ಷ್ಮಿ, ‘ಇಡೀ ರಾಜ್ಯ ಕಲ್ಯಾಣ ಕರ್ನಾಟಕ ಆಗಬೇಕು. ಇದು ಜನಾರ್ದನ ರೆಡ್ಡಿಯವರ ಬಯಕೆ. ತಾವು ಹುಟ್ಟಿ ಬೆಳೆದ ಬಳ್ಳಾರಿ ಪ್ರಚಂಚದ ಭೂಪಟದಲ್ಲಿ ಕಾಣಬೇಕು. ಅವರ ಆಶಯದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ ಎಂದರು.

Join Whatsapp