ವೃದ್ಧಾಶ್ರಮದಲ್ಲಿ ಬೆಂಕಿ ಅವಘಢ: ಇಬ್ಬರು ಸಜೀವ ದಹನ

Prasthutha|

- Advertisement -

ನವದೆಹಲಿ: ವೃದ್ಧಾಶ್ರಮದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಹಿರಿಜೀವಗಳೆರಡು ಸಜೀವ ದಹನವಾದ ದುರ್ಘಟನೆ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಡೆದಿದೆ.

ಬೆಳಿಗ್ಗೆ 5.14ರ ವೇಳೆಗೆ ಅಂಟಾರಾ ವೃದ್ಧಾಶ್ರಮದ 3ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮಹಡಿಯಲ್ಲಿದ್ದ ಕೆಲವರು ಎಚ್ಚರಗೊಂಡು ಸಾವಿನ ದವಡೆಯಿಂದ ಪಾರಾಗಿದ್ದಾರೆ.

- Advertisement -

ಆದರೆ, ಇಬ್ಬರು ಬೆಂಕಿಗೆ ದಹನವಾದರು. ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಗಳು 2 ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದ್ದಾರೆ.

Join Whatsapp