ದೆಹಲಿ ಪೊಲೀಸರಿಂದ ರಾಹುಲ್ ಗಾಂಧಿ ಬಂಧನ

Prasthutha|

ನವದೆಹಲಿ: ದಿಲ್ಲಿಯ ವಿಜಯ ಚೌಕದಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರತಿಭಟನಕಾರರ ನಾಯಕತ್ವ ವಹಿಸಿದ್ದ ರಾಹುಲ್ ಗಾಂಧಿಯವರನ್ನು ಪೊಲೀಸರು ಬಂಧಿಸಿ ಸಂಸತ್ ಭವನ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದ್ದಾರೆ.

- Advertisement -

ನ್ಯಾಶನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ ಆಪಾದನೆ ಮೇಲೆ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿಚಾರಣೆಯನ್ನು ಎರಡನೆಯ ಬಾರಿ ಇಡಿ- ಜಾರಿ ನಿರ್ದೇಶನಾಲಯದಲ್ಲಿ ನಡೆಯುತ್ತಿದೆ. ಕೇಂದ್ರೀಯ ತನಿಖಾ ದಳದಿಂದ ಸೋನಿಯಾರ ವಿಚಾರಣೆಯ ವಿರುದ್ಧ ಕಾಂಗ್ರೆಸ್ಸಿಗರು ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಿದರು.

ದಿಲ್ಲಿಯ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಚಿನ್ ಪೈಲೆಟ್ ಮಾತನಾಡಿ, “ಕೇಂದ್ರೀಯ ಏಜೆನ್ಸಿಗಳಿಗೆ ವಿರೋಧ ಪಕ್ಷಗಳವರನ್ನು ಗುರುತಿಸಿ ನೋಟಿಸ್ ಕಳುಹಿಸುವುದಷ್ಟೆ ಕೆಲಸವಾಗಿದೆ. ಕೇಂದ್ರ ಸರಕಾರವು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ನಮ್ಮ ಹಕ್ಕನ್ನು ಕಸಿದುಕೊಂಡಿದೆ” ಎಂದು ಟೀಕಿಸಿದರು.

- Advertisement -

ವಿಜಯ ಚೌಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿಯವರು “ಸಂಸತ್ತು ಸರಾಗವಾಗಿ ನಡೆಯಬೇಕು ಎನ್ನುತ್ತಾರೆ, ಚರ್ಚೆಗೂ ಅವಕಾಶವಿಲ್ಲ, ಪ್ರತಿಭಟನೆಗೂ ಅವಕಾಶವಿಲ್ಲ ಎಂದರೆ ಇದು ಎಂಥ ಸರಕಾರ” ಎಂದು ಪ್ರಶ್ನಿಸಿದರು.

ಅಷ್ಟರಲ್ಲಿ ಸಂಸತ್ ಭವನ ರಸ್ತೆಯ ಪೊಲೀಸ್ ಠಾಣೆಯ ಸಿಬ್ಬಂದಿ ರಾಹುಲ್ ಗಾಂಧಿಯವರನ್ನು ಬಂಧಿಸಿ ಕರೆದೊಯ್ದರು. ಇದು ಸಂಸತ್ತಿನಲ್ಲಿ ಚರ್ಚೆಯ ಲಕ್ಷಣವೇ ಎಂದು ರಾಹುಲ್ ಲಘು ದಾಟಿಯಲ್ಲಿ ಪ್ರಶ್ನಿಸಿದರು.

Join Whatsapp