ಪೈಲಟ್ ಡ್ರೆಸ್ ನಲ್ಲಿ ಮಗ; ಆಶ್ಚರ್ಯಗೊಂಡ ಹೆತ್ತವರು

Prasthutha|

ಹೊಸದಿಲ್ಲಿ: ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಹೆತ್ತವರಿಗೆ ಕೀರ್ತಿ ತರಬೇಕು ಎಂಬ ಕನಸು ಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪೈಲಟ್ ಒಬ್ಬರು ವಿಮಾನವನ್ನು ಚಲಾಯಿಸುವ ಮೂಲಕ ಪೋಷಕರನ್ನು ವಿಮಾನದಲ್ಲಿ ಕೂರಿಸಿ ರಾಜಸ್ಥಾನದ ಜೈಪುರಕ್ಕೆ ಬಿಟ್ಟು, ಮನೆಗೆ ಕಳುಹಿಸಿಕೊಟ್ಟಿದ್ದಾರೆ.

- Advertisement -

ಭಾರತೀಯ ಪೈಲಟ್ ಕಮಲ್ ಕುಮಾರ್ ತನ್ನ ಪೋಷಕರನ್ನು ವಿಮಾನದಲ್ಲಿ ಕೂರಿಸಿ ಜೈಪುರಕ್ಕೆ ಕರೆದುಕೊಂಡು ಹೋಗಿದ್ದು, ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಕುಮಾರ್ “ನಾನು ವಿಮಾನದಲ್ಲಿ ಹಾರಲು ಆರಂಭಿಸಿದಾಗಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ. ಕೊನೆಗೂ ಆ ದಿನ ಬಂದೇ ಬಿಟ್ಟಿತು. ಇವತ್ತು ನಾನು ನನ್ನ ತಂದೆ ತಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲು ಅವಕಾಶ ಸಿಕ್ಕಿತು” ಎಂದು ಹೇಳಿದ್ದಾರೆ.

- Advertisement -

ವಿಮಾನ ಹತ್ತಿದ ಪೋಷಕರಿಗೆ ವಿಮಾನ ಚಲಾಯಿಸಲು ಹೊರಟಿರುವುದು ತಮ್ಮ ಮಗ ಎಂಬ ವಿಚಾರ ತಿಳಿದಿರಲಿಲ್ಲ. ವಿಮಾನದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಪೈಲಟ್ ಧಿರಿಸಿನಲ್ಲಿದ್ದ ತಮ್ಮ ಮಗನನ್ನು ಕಂಡು  ಶಾಕ್ ಆಗಿದ್ದಾರೆ.

ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, 2.7 ಮಿಲಿಯನ್ ಗಿಂತಲೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ.

Join Whatsapp