ಬಜರಂಗ ದಳಕ್ಕೆ ಪಬ್ ಮೇಲೆ ದಾಳಿ ನಡೆಸಲು ಅಧಿಕಾರ ನೀಡಿದವರು ಯಾರು: ಜೆಡಿಎಸ್ ಕಿಡಿ

Prasthutha|

ಮಂಗಳೂರು: ನಿನ್ನೆ ಬಲ್ಮಠದ ಪಬ್ ಗೆ ಬಜರಂಗ ದಳದ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿದ್ದು ಖಂಡನೀಯ. ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಕೂಡ ಅದೇ ಸ್ಥಳದಲ್ಲಿ ಪಬ್ ದಾಳಿ ಆಗಿತ್ತು. ಆಗಲೂ ಮತ್ತು ಈಗಲೂ ಬಿಜೆಪಿ ಆಡಳಿತ ಇತ್ತು. ಅವರ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆಯೇ? ಇಂತಹ ದೂರ್ತ ಸಂಘಟನೆಗಳನ್ನು ಕೂಡಲೆ ನಿಷೇಧಿಸಬೇಕು ಎಂದು ಅಕ್ಷಿತ್ ಹೇಳಿದರು.


ಮಂಗಳೂರಿನಲ್ಲಿ ಇಂತಹ ಬಜರಂಗಿ ಗಲಾಟೆಯಿಂದ ಉದ್ಯಮಗಳಿಗೆ, ಶಾಲಾ ಕಾಲೇಜುಗಳಿಗೆ ತೊಂದರೆ ಆಗಿದೆ. ಇಂತಹ ಊರಿನ ಹೆಸರು ಕೆಡಿಸುವವರ ವಿರುದ್ಧ ಪಕ್ಷಾತೀತ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುವುದಾಗಿ ಅಕ್ಷಿತ್ ಹೇಳಿದರು.
ಇವರು ಗಲಾಟೆಯಿಂದಾಗಿ ಜಿಲ್ಲೆಯ ಹೆಸರು ಹಾಳಾಗುತ್ತಿದೆ. ಇವರು ವೀಡಿಯೋದವರನ್ನೂ ಕರೆದುಕೊಂಡು ಬರುವುದು ಏಕೆ, ಇಂತಹ ಅಪರಾಧಿ ಪ್ರವೃತ್ತಿಯು ಯುವ ಜನಾಂಗಕ್ಕೆ ಅವಮಾನಕರ ಎಂದು ಅವರು ಹೇಳಿದರು.

- Advertisement -


ಹಿಂದೆಯೂ ಇಂತಹ ಮತೀಯ ಸಂಘಟನೆಗಳ ಕೃತ್ಯದಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಇಲ್ಲಿ ದೇಶದ ವಿವಿಧ ಭಾಗಗಳ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಾರೆ. ಇಂತಹ ಘಟನೆಗಳು ಜಿಲ್ಲೆಯ ಘನತೆಗೆ ಕುಂದು ತರುತ್ತದೆ ಎಂದವರು ಹೇಳಿದರು.
ನಿನ್ನೆ ನಡೆದ ಕೃತ್ಯದಲ್ಲಿ ಭಾಗವಹಿಸಿದವರನ್ನು ಬಂಧಿಸಬೇಕು. ಅವರ ಹಿನ್ನೆಲೆ ಪರಿಶೀಲಿಸಬೇಕು. ಪೊಲೀಸ್ ಆಯುಕ್ತರು ಸೂಕ್ತ ಕ್ರಮ ವಹಿಸಬೇಕು. ಸರಕಾರ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.


ಇವರಿಗೆ ದಾಳಿಯ ಅನೈತಿಕ ಪೊಲೀಸ್ ಗಿರಿ ಹಕ್ಕು ನೀಡಿದವರು ಯಾರು? ಜಿಲ್ಲೆಯ ಐಟಿ, ಬಿಟಿ, ಹೋಟೆಲ್ ಇತ್ಯಾದಿ ಕ್ಷೇತ್ರ ಇವರಿಂದ ಬಾಧಿತವಾಗಿದೆ. ಜನ ನಡೆಯ ದುರುಪಯೋಗ ಅಕ್ಷಮ್ಯ. ಇಂತವರಿಂದಾಗಿ ಹೊಸ ಕಂಪನಿಗಳು ಬರಲು ಹೆದರುತ್ತಿವೆ, ಇದರಿಂದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಅಕ್ಷಿತ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಫೈಸಲ್ ರಹ್ಮಾನ್, ಹಿತೇಶ್ ರೈ, ಸುಮಿತ್ ಸುವರ್ಣ, ಲತೀಶ್ ಕರ್ಕೇರ, ರಶೀದ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp