ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ ತೆರೆಯಲು ಅವಕಾಶ ನೀಡುವ ಶಿಫಾರಸ್ಸಿಗೆ ರಘುರಾಮ್ ರಾಜನ್, ವಿರಾಲ್ ಆಚಾರ್ಯ ಆಕ್ಷೇಪ

Prasthutha|

ನವದೆಹಲಿ : ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ ತೆರೆಯಲು ಅವಕಾಶ ನೀಡುವ ಕುರಿತ ಆರ್ ಬಿಐಯ ಆಂತರಿಕ ಕಾರ್ಯನಿರ್ವಹಣಾ ಸಮೂಹ ಮಾಡಿರುವ ಶಿಫಾರಸ್ಸನ್ನು ಖ್ಯಾತ ಅರ್ಥಶಾಸ್ತ್ರಜ್ಞರುಗಳಾದ ರಘುರಾಮ್ ರಾಜನ್ ಮತ್ತು ವಿರಾಲ್ ಆಚಾರ್ಯ ಟೀಕಿಸಿದ್ದಾರೆ.

- Advertisement -

ಇದೊಂದು ಕೆಟ್ಟ ಆಲೋಚನೆ ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ಆರ್ ಬಿಐಯ ಮಾಜಿ ಉಪ ಗವರ್ನರ್ ವಿರಾಲ್ ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.

ಇದು ಇನ್ನಷ್ಟು ಆರ್ಥಿಕ ಮತ್ತು ರಾಜಕೀಯ ಅಧಿಕಾರವನ್ನು ಕಾರ್ಪೊರೇಟ್ ಸಂಸ್ಥೆಗಳ ಹಿಡಿತದಲ್ಲೇ ಕೇಂದ್ರೀಕೃತವಾಗುವಂತೆ ಮಾಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.



Join Whatsapp