ಚಿಕ್ಕಬಳ್ಳಾಪುರ | ಮೂರನೇ ಮಗುವೂ ಹೆಣ್ಣು | ಅಕ್ರಮ ಗರ್ಭಪಾತ | ಮಹಿಳೆ ಸಾವು

Prasthutha|

ಚಿಕ್ಕಬಳ್ಳಾಪುರ : ಮೂರನೆಯ ಮಗುವೂ ಹೆಣ್ಣು ಎಂಬ ಕಾರಣಕ್ಕೆ ಬಲವಂತದ ಗರ್ಭಪಾತ ಮಾಡಿಸಲ್ಪಟ್ಟಿದ್ದ 28 ವರ್ಷದ ಮಹಿಳೆ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಬಾಗೇಪಲ್ಲಿಯ ಪೋಲವರಪಲ್ಲಿ ಗ್ರಾಮದ ನಿವಾಸಿ ಶ್ರೀಕನ್ಯಾ 2014ರಲ್ಲಿ ಕೊಥಪಲ್ಲಿ ನಿವಾಸಿ, 38 ವರ್ಷದ ಸೋಮಶೇಖರ್ ಅವರನ್ನು ವಿವಾಹವಾಗಿದ್ದರು. ನಂತರ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಆಕೆಯ ಗಂಡ ಕುಟುಂಬದವರು ಗಂಡು ಮಗು ಬಯಸಿದ್ದರು ಎನ್ನಲಾಗಿದೆ.

- Advertisement -

ಎರಡು ಮಕ್ಕಳು ಹೆಣ್ಣು ಮಕ್ಕಳಾಗಿರುವುದರಿಂದ, ಮೂರನೇ ಮಗುವೂ ಹೆಣ್ಣಾಗಬಹುದು ಎಂಬ ಸಂದೇಹದಿಂದ ಅಕ್ರಮವಾಗಿ ಲಿಂಗಪತ್ತೆ ಮಾಡಿಸಿದ್ದರು. ಅದರಲ್ಲಿ ಮೂರನೆಯದೂ ಹೆಣ್ಣು ಮಗು ಎಂದು ತಿಳಿದಾಗ ಬಲವಂತದ ಗರ್ಭಪಾತ ಮಾಡಿಸಿದ್ದರು. ಇದರ ನಂತರ ಆರೋಗ್ಯ ಹದಗೆಟ್ಟ ಮಹಿಳೆಯು, ಸಾವನ್ನಪ್ಪಿದ್ದಾಳೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.

- Advertisement -