ರಸ್ತೆಯಲ್ಲಿ ತೆಪ್ಪ ಸವಾರಿ ಮತ್ತು ಭತ್ತ ನಾಟಿ ಮಾಡಿ ಹೀಗೊಂದು ಪ್ರತಿಭಟನೆ !

Prasthutha|

ಬೆಂಗಳೂರು: ಬೆಂಗಳೂರಿನ ಅಂಜನಾಪುರ ಮುಖ್ಯ ರಸ್ತೆಯಲ್ಲಿ ತೆಪ್ಪ ಸವಾರಿ ಮತ್ತು ಭತ್ತ ನಾಟಿ ಮಾಡಿ ಹೀಗೊಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

- Advertisement -

ಅಂಜನಾಪುರ ಮುಖ್ಯ ರಸ್ತೆಯ ಡಾಮರು ಕಿತ್ತುಹೋಗಿ ಕೆಸರು ಗದ್ದೆಯ ರೀತಿ ಕಂಡುಬಂದಿದೆ. ಜೋರು ಮಳೆ ಆದಾಗ ಅಂಜನಾಪುರ ಮುಖ್ಯ ರಸ್ತೆ ತೊರೆಯಾಗಿ ಹರಿಯುತ್ತದೆ.

ಇಂದು ಸ್ಥಳೀಯ ನಾಗರಿಕರು ಪ್ರತಿಭಟನೆಗಾಗಿ ಈ ರಸ್ತೆಯಲ್ಲಿ ತೆಪ್ಪ ಓಡಿಸಿದರು. ತೆಪ್ಪ ಸವಾರಿ ಬಯಸುವವರಿಗೆ ರೂ. 20 ಶುಲ್ಕ ವಿಧಿಸಿದರು. ಕೊನೆಗೆ ರಸ್ತೆಯ ನಡುವೆ ಭತ್ತ ನಾಟಿ ಮಾಡಿ ಜನಪ್ರತಿನಿಧಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

- Advertisement -

ವಿಷಯ ತಿಳಿದ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರು ಸ್ಥಳಕ್ಕೆ ಧಾವಿಸಿ ಬಂದು ಜನರ ಅಹವಾಲು ಆಲಿಸಿದರು. ಪರಿಹಾರ- ನಾಟಿಯಾದ ಭತ್ತ ಫಲ ನೀಡಿದರೆ ರಸ್ತೆಯ ಸಮಸ್ಯೆಗೂ ಪರಿಹಾರ ದೊರಕಿತು.



Join Whatsapp