ಬಿಜೆಪಿ ತೊರೆದು ಟಿ.ಎಮ್.ಸಿ. ಗೆ ಸೇರ್ಪಡೆಯಾದ ಬಿಜೆಪಿ ಶಾಸಕ ಸೌಮೆನ್ ರಾಯ್

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಿಸಿದ ನಡುವೆಯೇ ಬಿಜೆಪಿ ಶಾಸಕ ಸೌಮೆನ್ ರಾಯ್ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಕಲಿಯಗಂಜ್ ಬಿಜೆಪಿ ಶಾಸಕರರಾದ ಸೌಮೆನ್ ರಾಯ್ ಈ ಹಿಂದೆ ಟಿ.ಎಮ್.ಸಿ ಸದಸ್ಯರಾಗಿದ್ದರು. ಬಂಗಾಳ ಮತ್ತು ಉತ್ತರ ಬಂಗಾಳದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಅವರು ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾರೆ ಎಂದು ಟಿ.ಎಮ್.ಸಿ ನಾಯಕ ಪಾರ್ಥ ಚಟರ್ಜಿ ತಿಳಿಸಿದರು.

- Advertisement -

ಬಂಗಾಳದ ಸಂಸ್ಕ್ರತಿ ಮತ್ತು ಪರಂಪರೆಯನ್ನು ಜೀವಂತವಿರಿಸುವ ನಿಟ್ಟಿನಲ್ಲಿ ಸೌಮೆನ್ ರಾಯ್ ಕಾರ್ಯಯೋಜನೆ ರೂಪಿಸಲಿದ್ದಾರೆ ಎಂದು ಚಟರ್ಜಿ ತಿಳಿಸಿದರು.

- Advertisement -