ಕತಾರ್ ಇಂಡಿಯನ್ ಸೋಷಿಯಲ್ ಫೋರಮ್ ನೂತನ ಪದಾಧಿಕಾರಿಗಳ ಆಯ್ಕೆ

Prasthutha|

ಕತಾರ್: ಕತಾರ್ ಇಂಡಿಯನ್ ಸೋಷಿಯಲ್ ಫೋರಮ್ (QISF), ಕರ್ನಾಟಕ ರಾಜ್ಯದ, 2021-2024 ನೇ ಸಾಲಿನ, ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು. ಚುನಾವಣಾಧಿಕಾರಿ ಬಷೀರ್ ಅಹಮದ್, ಅಬ್ದುಲ್ ನಸೀರ್ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು.

- Advertisement -


ಅಧ್ಯಕ್ಷರಾಗಿ ನಜೀ಼ರ್ ಪಾಷ, ಉಪಾಧ್ಯಕ್ಷರಾಗಿ ಮುಹಮ್ಮದ್ ಜಿ಼ಯಾ ಹಖ್, ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಜ್ ಅಬ್ದುಲ್ ರಜಾ಼ಖ್ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಮುಹಮ್ಮದ್ ಫಹದ್ ಮತ್ತು ರಿಝ್ವಾನ್ ಅಹಮದ್ ಚುನಾಯಿತರಾದರು.
ಸದಸ್ಯರಾಗಿ ತಪ್ಸೀರ್ ಮನ್ಹಾರ್, ಶಾಫಿ ಕಾರ್ಕಳ, ಅಬ್ದುಲ್ ಮಯೀಜ಼್, ಖಾಲಿದ್ ಮೊಹಸೀನ್, ಹುಸೈನ್ ಉಡುಪಿ ಮತ್ತು ಶಾನವಾಜ್ ಫಜ್ಲುದ್ದೀನ್ ಚುನಾಯಿತರಾದರು.


ರಾಜ್ಯಾಧ್ಯಕ್ಷರಾಗಿ ಚುನಾಯಿತರಾದ ನಜೀ಼ರ್ ಪಾಷ ಮಾತನಾಡಿ, ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಕೆಲಸ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ನೂತನ ಪದಾಧಿಕಾರಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಸಮಾಜ ಸೇವೆಗಾಗಿ ಮೀಸಲಿಟ್ಟು, ನಿಷ್ಪಕ್ಷಪಾತವಾಗಿ ಕೆಲಸ ಮಾಡಿ, ಕ್ಯೂಐಎಸ್ಎಫ್ ಗೆ ಹೆಚ್ಚು ಹೆಚ್ಚು ಸದಸ್ಯರನ್ನು ಸೇರಿಸುವ ಮೂಲಕ, ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಮುಂದಾಗಬೇಕೆಂದು ಕರೆ ನೀಡಿದರು.

- Advertisement -


ನೂತನವಾಗಿ, 2021-2024 ರ ಸಾಲಿಗೆ ಆಯ್ಕೆಯಾದ ಕರ್ನಾಟಕ ರಾಜ್ಯ, ಬ್ಲಾಕ್ ಮಟ್ಟದ ನಾಯಕರು, IFF ಉತ್ತರ ರಾಜ್ಯಗಳ ಅಧ್ಯಕ್ಷರಾದ ಫಸೀ ಉದ್ದೀನ್ ಹಾಗೂ ರಾಜ್ಯದ ನಿರ್ಗಮಿತ ಪದಾಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಮುಹಮ್ಮದ್ ಜಿ಼ಯಾ ಹಖ್, ರಿಜ್ವಾನ್ ಅಹಮದ್, ಇಮ್ತಿಯಾಜ಼್ ,ಅಬ್ದುಲ್ ರಜಾ಼ಖ್, ಮುಜೀಬ್ ಉಲ್ಲಾ ಖಾನ್, ಮುಹಮ್ಮದ್ ಫಹದ್, ಸುಲೈಮಾನ್ ಕೊಡ್ಲಿಪೇಟೆ, ಖಲಂದರ್ ಜಲಸೂರ್, ರಫೀಖ್ ಉಪ್ಪಿನಂಗಡಿ, ಅನ್ವರ್ ಅಂಗರಗುಂಡಿ, ಅತೀಖ್ ಮಡಿಕೇರಿ, ಖಾಲಿದ್ ಮೊಹಸೀನ್, ಅಬೂಬಕರ್ ಜೋಕಟ್ಟೆ, ಅಶ್ರಫ್ ಗೇರುಕಟ್ಟೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕ್ಯೂ ಐ ಎಸ್ ಎಫ್ ನ ಪ್ರತಿಯೊಂದು ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಸತ್ಯದ ಹಾದಿಯಲ್ಲಿ, ನಿಷ್ಪಕ್ಷಪಾತ ಸೇವೆ ಮಾಡುವುದಾಗಿ ಪಣ ತೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ರಫೀಖ್ ಉಪ್ಪಿನಂಗಡಿ ವಹಿಸಿಕೊಂಡಿದ್ದರು.

Join Whatsapp