ಹರ್ಯಾಣದ ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ಈ ಸಂಘಟನೆಗಳ ಸದಸ್ಯರಾಗಬಹುದು!

Prasthutha|

ಹೊಸದಿಲ್ಲಿ: ಸರ್ಕಾರಿ ಅಧಿಕಾರಿಗಳು ಆರ್‌ಎಸ್‌ಎಸ್ ಮತ್ತು ಜಮಾತ್-ಎ-ಇಸ್ಲಾಮಿ ಸಂಘಟನೆಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಹೇರಿದ್ದ ನಿಷೇಧವನ್ನು ಹರಿಯಾಣದ ಬಿಜೆಪಿ ಸರ್ಕಾರ ಹಿಂಪಡೆದಿದೆ.

- Advertisement -

54 ವರ್ಷಗಳಿಂದ ಜಾರಿಯಲ್ಲಿದ್ದ ನಿಷೇಧವನ್ನು ತೆಗೆದುಹಾಕಲಾಗಿದೆ. ಈ ಆದೇಶದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.  ಹೊಸ ಆದೇಶವು ಹರಿಯಾಣ ನಾಗರಿಕ ಸೇವಾ ನಿಯಮಗಳು (ನೀತಿ ಸಂಹಿತೆ) 2016 ರ ಪ್ರಕಾರ ರಾಜಕೀಯ ಪಕ್ಷಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ದೇಶದ ಸಮಗ್ರತೆ ಮತ್ತು ಏಕತೆಗೆ ವಿರುದ್ಧವಾಗಿ ಕೆಲಸ ಮಾಡುವ ಸಂಸ್ಥೆಗಳಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ಕೆಲಸ ಮಾಡಬಾರದು ಅಥವಾ ಪ್ರಚಾರ ಮಾಡಬಾರದು ಎಂದು ಹೊಸ ಆದೇಶವು ಹೇಳುತ್ತದೆ.

ಹಳೆಯ ಆದೇಶಗಳನ್ನು ಹಿಂಪಡೆಯಲಾಗುವುದು ಎಂದೂ ಅದು ಹೇಳುತ್ತದೆ. ಇದರೊಂದಿಗೆ ಆರ್‌ಎಸ್‌ಎಸ್ ಮತ್ತು ಜಮಾತ್-ಎ-ಇಸ್ಲಾಮಿಯ ಹೆಸರಿನಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಿದ್ದ 1967 ರ ಆದೇಶವನ್ನು ರದ್ದುಪಡಿಸಲಾಯಿತು.

Join Whatsapp