ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ KSRTC ಬಸ್

Prasthutha|

ಸವಣೂರು: ಚಾಲಕನ ನಿಯಂತ್ರಣ ತಪ್ಪಿದ KSRTC ಬಸ್ಸೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಘಟನೆ ಸರ್ವೆಯಲ್ಲಿ ನಡೆದಿದೆ.

- Advertisement -


ಜಲಜೀವನ್ ಯೋಜನೆಯಡಿ ಮಣ್ಣು ಅಗೆದು ಪೈಪ್ ಅಳವಡಿಸಲಾಗಿತ್ತು. ಮಳೆ ಬಂದ ಕಾರಣ ಆ ಮಣ್ಣು ಮೆದುವಾಗಿತ್ತು. ಪುತ್ತೂರಿನಿಂದ ಸವಣೂರು ಮೂಲಕ ಪಂಜ ಕಡೆಗೆ ಹೋಗುತ್ತಿದ್ದ ಬಸ್ ಸರ್ವೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ ಬಿಡಲೆಂದು ಬದಿಗೆ ಸರಿದಾಗ ಬದಿಯ ಮಣ್ಣು ಮೃದುವಾಗಿದ್ದ ಕಾರಣ ಚರಂಡಿಗೆ ಬಸ್ಸು ವಾಲಿ ನಿಂತಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ.

Join Whatsapp