ಮೊರಾಕ್ಕೋದಲ್ಲಿ ಭೂಕಂಪ: 2800 ದಾಟಿದ ಮೃತರ ಸಂಖ್ಯೆ

Prasthutha|

ಕಾಸಾಬ್ಲಾಂಕಾ: ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 2800 ಕ್ಕೆ ಏರಿಕೆಯಾಗಿದೆ. ಅಪಾರ ಸಂಖ್ಯೆಯಲ್ಲಿ ಜನ ಗಾಯಗೊಂಡಿದ್ದಾರೆ.

- Advertisement -

ನಗರಗಳು ಮತ್ತು ಪಟ್ಟಣಗಳ ಹೊರಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಸಚಿವಾಲಯ ತಿಳಿಸಿದೆ.


ಭೂಕಂಪದಿಂದ ಸಂಭವಿಸಿದ ಕಟ್ಟಡ ಕುಸಿತಗಳ ಅವಶೇಷಗಳ ಅಡಿ ಬದುಕಿಕೊಂಡಿರುವವರಿಗಾಗಿ ಶೋಧ ಹಾಗೂ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

Join Whatsapp