ದೇವಸ್ಥಾನದ ಆವರಣದಲ್ಲಿ RSS ಶಸ್ತ್ರಾಸ್ತ್ರ ತರಬೇತಿ ನಿಷೇಧಿಸಿದ ಕೇರಳ ಹೈಕೋರ್ಟ್

Prasthutha|

ಕೊಚ್ಚಿ: ತಿರುವನಂತಪುರಂ ಜಿಲ್ಲೆಯ ಶರ್ಕರಾ ದೇವಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (RSS) ಕೇರಳ ಹೈಕೋರ್ಟ್ ಶಾಕ್ ನೀಡಿದೆ.

- Advertisement -


ಆರೆಸ್ಸೆಸ್ ಹಾಗೂ ಅದರ ಸದಸ್ಯರು ದೇವಸ್ಥಾನದ ಆವರಣದ “ಅಕ್ರಮ ಹಾಗೂ ಅನಧಿಕೃತ ಬಳಕೆ” ತಡೆಯುವ ಆದೇಶ ನೀಡುವಂತೆ ಕೋರಿ ಇಬ್ಬರು ಭಕ್ತರು ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡುವಾಗ ಈ ನಿರ್ದೇಶನ ಹೈಕೋರ್ಟ್ ನಿಂದ ಬಂದಿದೆ.


ಶರ್ಕರಾ ದೇವಿ ದೇವಸ್ಥಾನವು ಟ್ರಾವೆಂಕೋರ್ ಬೋರ್ಡ್ ಅಡಿಯಲ್ಲಿದೆ. ಟ್ರಾವೆಂಕೋರ್ ದೇವಸ್ಥಾನಂ ಮಂಡಳಿಯು ಈ ಹಿಂದೆ ನೀಡಿದ್ದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ, ಮಂಡಳಿಯು ನಡೆಸುವ ದೇಗುಲಗಳಲ್ಲಿ ಆರ್ ಎಸ್ ಎಸ್ ನಡೆಸುವ ಸಾಮೂಹಿಕ ವ್ಯಾಯಾಮಗಳನ್ನು ನಿಷೇಧಿಸಿದೆ.

Join Whatsapp