ಡಿ.18ರಿಂದ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ | ಪರೀಕ್ಷಾ ಸಮಯದಲ್ಲಿ ಕೊಂಚ ಬದಲಾವಣೆ

Prasthutha|

ಬೆಂಗಳೂರು: ಇದೇ 18ರಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ನಡೆಯಲಿದೆ. ಪ್ರಕಟಿಸಲಾದ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಯು ಬೆಳಗ್ಗೆ 9ರಿಂದ 12.15ರವರೆಗೆ ಹಾಗೂ ಮಧ್ಯಾಹ್ನದ ಅವಧಿಯನ್ನು 2ರಿಂದ ಸಂಜೆ   5.15ರವರೆಗೆ ನಿಗದಿಪಡಿಸಲಾಗಿತ್ತು.

- Advertisement -

ಆದರೆ, ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕಾರಣ ಹಾಗೂ ಸಾರ್ವಜನಿಕರ ಮನವಿ ಮೇರೆಗೆ ಬೆಳಗಿನ ಪರೀಕ್ಷಾ ಸಮಯವನ್ನು ಮಾತ್ರ 9.30ರಿಂದ 12.45ರವರೆಗೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಧ್ಯಾಹ್ನದ ಪರೀಕ್ಷಾ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Join Whatsapp