ಕೃಷಿ ಕಾನೂನು ವಿರುದ್ಧ RSS ಬೆಂಬಲಿತ ರೈತ ಸಂಘದಿಂದ ಪ್ರತಿಭಟನೆ!

Prasthutha|

ಹೊಸದಿಲ್ಲಿ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ RSS ಬೆಂಬಲಿತ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ್ ಕರೆ ನೀಡಿದೆ.

- Advertisement -

ಹೊಸ ಕೃಷಿ ಕಾನೂನಿನಲ್ಲಿ ಬೆಂಬಲ ಬೆಲೆಗಳ ಬೇಡಿಕೆಗಳನ್ನು ಕೇಂದ್ರವು ಈಡೇರಿಸದ ಕಾರಣ ಬಿಕೆಎಸ್ ಸೆಪ್ಟೆಂಬರ್ 8 ರಂದು ಪ್ರತಿಭಟನೆ ನಡೆಸಲಿದೆ. ಆಗಸ್ಟ್ 31 ರೊಳಗೆ ಅವರ ಬೇಡಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು.

ಬೆಳೆ ಉತ್ಪಾದನೆಯ ವೆಚ್ಚಕ್ಕೆ ಅನುಗುಣವಾಗಿ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಮತ್ತು ಹೊಸ ಕೃಷಿ ಕಾನೂನುಗಳಲ್ಲಿ ರೈತರ ಕಳವಳವನ್ನು ಗಣನೆಗೆ ತೆಗೆದುಕೊಂಡು ಹೊಸ ಕಾನೂನನ್ನು ಜಾರಿಗೊಳಿಸಬೇಕು ಎಂದು ಭಾರತೀಯ ಕಿಸಾನ್ ಸಂಘವು (ಬಿಕೆಎಸ್) ಒತ್ತಾಯಿಸಿತ್ತು. ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 8ರಂದು ದೇಶಾದ್ಯಂತ ಸಾಂಕೇತಿಕ ಧರಣೆಯನ್ನು ಆಯೋಜಿಸಲು ಬಿಕೆಎಸ್ ಸಿದ್ಧತೆ ನಡೆಸಿದೆ.

Join Whatsapp