ಭಾರತ ಸೇರಿದಂತೆ ನಾಲ್ಕು ದೇಶಗಳನ್ನು ಕೆಂಪು ಪಟ್ಟಿಯಿಂದ ತೆರವುಗೊಳಿಸಿದ ಬಹ್ರೈನ್ ಪ್ರಾಧಿಕಾರ

Prasthutha|

ಮನಮಾ: ಬಹ್ರೈನ್ ದೇಶವು, ಭಾರತ ಸೇರಿದಂತೆ 4 ದೇಶಗಳನ್ನು ಕೆಂಪುಪಟ್ಟಿಯಿಂದ ತೆರವುಗೊಳಿಸಿ ಆದೇಶ ಹೊರಡಿಸಿದೆ. ಬಹ್ರೈನ್ ನ ನೂತನ ಈ ಆದೇಶವು ಸೆ.3 ರಿಂದ ಜಾರಿಗೆ ಬರಲಿದೆ ಎಂದು ಬಹ್ರೈನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

- Advertisement -

ಕೋವಿಡ್ – 19 ವಿರುದ್ಧ ಹೋರಾಡಲು ರಾಷ್ಟ್ರೀಯ ಯೋಜನೆವೊಂದನ್ನು ತಯಾರಿಸಿದ್ದ ಬಹ್ರೈನ್ ಈ ಹಿಂದೆ ಹಲವು ರಾಷ್ಟ್ರಗಳನ್ನು ಕೆಂಪುಪಟ್ಟಿಗೆ ಸೇರಿಸಲು ನಾಗರಿಕ ವಿಮಾನಯಾನ ವ್ಯವಹಾರ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಪ್ರಸಕ್ತ ಭಾರತ ಸೇರಿದಂತೆ 4 ದೇಶಗಳನ್ನು ಕೆಂಪುಪಟ್ಟಿಯಿಂದ ತೆರವುಗೊಳಿಸಿ ತನ್ನ ಆದೇಶವನ್ನು ನವೀಕರಿಸಿದೆ.

ನೂತನ ಆದೇಶದನ್ವಯ ಭಾರತ, ಪಾಕಿಸ್ತಾನ, ಪನಾಮ ಮತ್ತು ಡೊಮಿನಿಕ್ ರಿಪಬ್ಲಿಕ್ ರಾಷ್ಟ್ರಗಳು ಬಹ್ರೈನ್ ನ ಕೆಂಪುಪಟ್ಟಿಯಿಂದ ಹೊರಗುಳಿಯಲಿವೆ.

- Advertisement -

ಕೋವಿಡ್ – 19 ಅಧಿಕೃತ ಲಸಿಕೆ ಪ್ರಮಾಣಪತ್ರಗಳೊಂದಿಗೆ ಈ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಪೂರ್ವ- ಪ್ರಯಾಣದ ಪಿ.ಸಿ.ಆರ್ ಪರೀಕ್ಷೆಗಳು ಇನ್ನು ಮುಂದೆ ಅಗತ್ಯವಿಲ್ಲ. ಆದಾಗ್ಯೂ ಬಹ್ರೈನ್ ಪ್ರವೇಶಿಸಿದ ಮೊದಲ ದಿನ, ಐದು ಮತ್ತು ಹತ್ತನೇ ದಿನಗಳಲ್ಲಿ ಪಿ.ಸಿ.ಆರ್ ಪರೀಕ್ಷೆ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಬಹ್ರೈನ್ ನಾಗರಿಕ ವಿಮಾನಯಾನ ಅಧಿಕಾರಿಗಳು ರಿಪಬ್ಲಿಕ್ ಆಫ್ ಬೋಸ್ನಿಯಾ, ಹರ್ಜೆಗೋವಿನಾ, ರಿಪಬ್ಲಿಕ್ ಆಫ್ ಸ್ಲೋವೇನಿಯಾ, ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ, ರಿಪಬ್ಲಿಕ್ ಆಫ್ ಕೋಸ್ಟರಿಕಾ, ಮತ್ತು ಈಕ್ವೆಡಾರ್ ಗಣರಾಜ್ಯ, ಶ್ರೀಲಂಕಾ, ಟುನೀಶಿಯಾ, ಜಾರ್ಜಿಯಾ, ಬಾಂಗ್ಲಾದೇಶ, ಫಿಲಿಪೈನ್ಸ್, ನೇಪಾಳ, ಇರಾನ್, ಇರಾಕ್, ಮಲೇಷ್ಯಾ, ವಿಯೆಟ್ನಾಂ, ದಕ್ಷಿಣ ಆಫ್ರಿಕಾ, ಉಗಾಂಡಾ, ಜಿಂಬಾಬ್ವೆ, ಮೆಕ್ಸಿಕೋ, ನಮೀಬಿಯಾ, ಮೊಜಾಂಬಿಕ್, ಇಂಡೋನೇಷ್ಯಾ, ಮ್ಯಾನ್ಮಾರ್, ಮಂಗೋಲಿಯಾ, ಮೊಜಾಂಬಿಕ್, ಉಕ್ರೇನ್ ಮತ್ತು ಮಲಾವಿ ರಾಷ್ಟ್ರಗಳನ್ನು ಕೆಂಪುಪಟ್ಟಿಯಲ್ಲಿ ಮುಂದುವರಿಸಿದ್ದಾರೆ.

ಬಹ್ರೈನ್ ನಾಗರಿಕರನ್ನು ಹೊರತುಪಡಿಸಿ ಕೆಂಪುಪಟ್ಟಿಯಲ್ಲಿರುವ ರಾಷ್ಟ್ರಗಳ ಪ್ರಯಾಣಿಕರು ಬಹ್ರೈನ್ ಪ್ರವೇಶಕ್ಕೆ ನಿಷೇಧ ಹೇರಿದೆ.
ಮೇ 24 ರಂದು ಕೆಂಪು ಪಟ್ಟಿಯಲ್ಲಿರುವ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳವನ್ನು ಒಳಗೊಂಡಂತೆ ಹಲವಾರು ದೇಶಗಳ ಪ್ರಯಾಣಿಕರಿಗೆ ಬಹ್ರೈನ್ ಪ್ರವೇಶವನ್ನು ಸ್ಥಗಿತಗೊಳಿಸಿತ್ತು.

Join Whatsapp