ನಿಗೂಢ ಜ್ವರಕ್ಕೆ ಯುಪಿಯ ಫಿರೋಝಬಾದ್ ನಲ್ಲಿ 45 ಮಕ್ಕಳು ಸೇರಿದಂತೆ 60 ಜನರು ಬಲಿ

Prasthutha|

ಫಿರೋಜಾಬಾದ್: ಡೆಂಗ್ಯೂಗೆ ಹೋಲುವ ನಿಗೂಢ ವೈರಲ್ ಜ್ವರದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಯುಪಿಯ ಫಿರೋಝಬಾದ್ ನಲ್ಲಿ ಕನಿಷ್ಠ 60 ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿ 45 ಮಕ್ಕಳು ಒಳಗೊಂಡಿರುವುದು ಜನತೆಯನ್ನು ಆತಂಕಕ್ಕೀಡುಮಾಡಿದೆ.

ಅಧಿಕ ಜ್ವರ ಮತ್ತು ಕಡಿಮೆ ಪ್ಲೇಟೆಟ್ ಈ ಜ್ವರದ ಲಕ್ಷಣಗಳಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗುರುವಾರ 35 ಮಕ್ಕಳು, 6 ವಯಸ್ಕರು ಸೇರಿದಂತೆ ಒಟ್ಟು 41 ಮಂದಿ ಸಾವನ್ನಪ್ಪಿದಾರೆಂದು ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ. ಮಾತ್ರವಲ್ಲದೆ ಆರೋಗ್ಯ ಇಲಾಖೆ ಡೆಂಗ್ಯೂ ಮತ್ತು ಕೋವಿಡ್ – 19 ಪರೀಕ್ಷೆಗಳನ್ನು ನಡೆಸಿ, ರೋಗದ ಸಾಧ್ಯತೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

- Advertisement -

ಫಿರೋಜಾಬಾದ್ ವೈದ್ಯಕೀಯ ಕಾಲೇಜಿನಲ್ಲಿ, ಜ್ವರದಿಂದ ಬಳಲುತ್ತಿರುವ ಮಕ್ಕಳ ಸಾಲುಗಳಿಂದ ದೃಶ್ಯಗಳು ಭಯಾನಕವಾಗಿವೆ ಎಂದು ಮಾಧ್ಯಮಗಳು ತಿಳಿಸಿವೆ. ಬುಧವಾರ 186 ಕ್ಕೂ ಹೆಚ್ಚಿನ ಜನರಲ್ಲಿ ಒಂದೇ ರೀತಿಯ ರೋಗಲಕ್ಷಣಗಳೊಂದಿಗೆ ಫಿರೋಜಾಬಾದ್ ವೈದ್ಯಕೀಯ ಕಾಲೇಜಿನಲ್ಲಿ ಒಳರೋಗಿಗಳಾಗಿ ದಾಖಲಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಂಡವು ನಿಗೂಢ ಜ್ವರದ ಕಾರಣಗಳನ್ನು ಕಂಡುಹಿಡಿಯಲು ರೋಗಿಗಳ ಮಾದರಿಯನ್ನು ಸಂಗ್ರಹಿಸಿದೆ. ಈ ಕುರಿತು ಅಧ್ಯಯನ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯವು ಯುಪಿಗೆ ಕಳುಹಿಸಿದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC) ತಂಡವು ಪ್ರಸ್ತುತ ಫಿರೋಜಾಬಾದ್‌ನಲ್ಲಿ ಅಧ್ಯಯನ ನಡೆಸುತ್ತಿದೆ ಎಂದು ವರದಿಗಳು ದೃಢಪಡಿಸಿವೆ. ಮಾತ್ರವಲ್ಲ ಮಥುರಾದಲ್ಲಿ ಸುಮಾರು 25 ಪ್ರಕರಣಗಳನ್ನು ಒಂದೇ ರೀತಿಯ ಡೆಂಗ್ಯೂ ಲಕ್ಷಣಗಳು ದೃಢಪಟ್ಟಿವೆ.

ವ್ಯಾಪಕವಾಗಿ ಹರಡುತ್ತಿರುವ ರೋಗದ ಹಿನ್ನೆಲೆಯಲ್ಲಿ 1 ರಿಂದ 8 ರ ವರೆಗಿನ ತರಗತಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮಾತ್ರವಲ್ಲದೆ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಕಳಪೆ ಆರೋಗ್ಯ ಸೇವೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದ ಫಿರೋಜಾಬಾದ್, ಮಥುರಾ, ಆಗ್ರಾ ಮತ್ತು ಇತರ ಹಲವು ಸ್ಥಳಗಳಲ್ಲಿ ಜ್ವರದಿಂದ “ಮಕ್ಕಳು ಸೇರಿದಂತೆ 100 ಜನರು ಸಾವನ್ನಪ್ಪಿದ್ದಾರೆ” ಎಂಬ ಸುದ್ದಿ ತುಂಬಾ ಆತಂಕಕಾರಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

- Advertisement -