ಬ್ರಿಟನ್‌ ರಾಣಿ ಎಲಿಜಬೆತ್ II ರ ಪತಿ ಪ್ರಿನ್ಸ್ ಫಿಲಿಪ್ ನಿಧನ

Prasthutha|

ಲಂಡನ್‌: ರಾಣಿ ಎಲಿಜಬೆತ್ II ರ ಪತಿ ಪ್ರಿನ್ಸ್ ಫಿಲಿಪ್ ನಿಧನರಾಗಿದ್ದಾರೆ ಎಂದು ಬಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ.

 99 ವರ್ಷ ವಯಸ್ಸಾದ ‘ರಾಯಲ್ ಹೈನೆಸ್’ ಇಂದು ಬೆಳಿಗ್ಗೆ ವಿಂಡ್ಸರ್ ಕ್ಯಾಸ್ಟಲ್ ನಲ್ಲಿ ನಿಧನರಾದರು ಎಂದು ರಾಯಲ್ ಫ್ಯಾಮಿಲಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಗ್ರೀಕ್ ರಾಜಕುಮಾರನಾಗಿದ್ದ ಪ್ರಿನ್ಸ್ ಫಿಲಿಪ್ 1947 ರಲ್ಲಿ ಬ್ರಿಟನ್ ರಾಣಿ ಎಲಿಜಬೆತ್ II ‌ರನ್ನು ವಿವಾಹವಾದರು. ಅವರು ರಾಣಿ ಎಲಿಜೆಬೆತ್ II ರೊಂದಿಗೆ 70 ವರ್ಷ ದಾಂಪತ್ಯ ಜೀವನ ನಡೆಸಿದ್ದಾರೆ. ಫಿಲಿಪ್ ಎರಡನೆಯ ಮಹಾಯುದ್ಧದ ನಂತರದ ಅವಧಿಯಲ್ಲಿ ರಾಜಪ್ರಭುತ್ವವನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

- Advertisement -