ಇಂದು ಮಡಿಕೇರಿ ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

Prasthutha|

ಮಡಿಕೇರಿ: ಬಹು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಮಡಿಕೇರಿ ನಗರಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಇಂದು ತೆರೆ ಕಾಣಲಿದೆ. ಇಂದು ಮಡಿಕೇರಿ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆಗೆ ನಡೆಯಲಿದ್ದು ಅವಿರೋಧ ಆಯ್ಕೆಯಾಗದೆ ಚುನಾವಣೆ ನಡೆದರೆ ಕೈ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

- Advertisement -


ಅ.11 ರಂದು ನಡೆಯ ಬೇಕಿದ್ದ ಚುನಾವಣಾ ಪ್ರಕ್ರಿಯೆ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಅವರಿಗೆ ನೋಟಿಸ್ ತಲುಪದ ಕಾರಣ, ನಗರಸಭೆಯಲ್ಲಿ ನಡೆದ ಗದ್ದಲ, ಕೋಲಾಹಲದ ಬಳಿಕ ಚುನಾವಣೆಯನ್ನು ಮುಂದೂಡಲಾಗಿತ್ತು, ಇದೀಗ ಮುಂದುವರಿದ ಭಾಗದಂತೆ ಇಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.


ಬಿಜೆಪಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ನಗರಸಭೆಯಲ್ಲಿ ಒಟ್ಟು 23 ವಾರ್ಡ್ ಗಳ ಪೈಕಿ ಬಿಜೆಪಿ 16, ಎಸ್ ಡಿಪಿಐ 5, ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಸದಸ್ಯ ಬಲವನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಅನಿತಾ ಪೂವಯ್ಯ ಹಾಗೂ ಎಸ್ಡಿಪಿಐ ಯ ಮೇರಿ ವೇಗಸ್ ಸ್ಪರ್ಧಿಸಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯ ಸವಿತಾ ರಾಕೇಶ್ ಹಾಗೂ ಎಸ್ಡಿಪಿಐ ಯ ನೀಮಾ ಅರ್ಷದ್ ಕಣಕ್ಕಿಳಿಯಲಿದ್ದಾರೆ.

Join Whatsapp