ತ್ರಿಪುರಾದಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ಕ್ರೂರ ದೌರ್ಜನ್ಯ: ರಾಹುಲ್ ಗಾಂಧಿ

Prasthutha|

ಅಗರ್ತಲಾ: ತ್ರಿಪುರಾದಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ಕ್ರೂರ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಆರೋಪಿಸಿದ್ದಾರೆ.

- Advertisement -

ದೇಶದ ಪ್ರಬಲ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ದಾಳಿಯ ಬಗ್ಗೆ ಬಿಜೆಪಿ ಸರ್ಕಾರ ಕಿವುಡು ಮತ್ತು ಕುರುಡುತನವನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದರು.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ತ್ರಿಪುರಾದಲ್ಲಿ ಮಸೀದಿ, ಮುಸ್ಲಿಮರ ನಿವಾಸಗಳ ಮೇಲೆ ರಾಜ್ಯವ್ಯಾಪ್ತಿಯಾಗಿ ನಡೆಯುತ್ತಿರುವ ದಾಳಿಗಳ ಕುರಿತು ಬಿಜೆಪಿಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

- Advertisement -

ಮಾತ್ರವಲ್ಲ ಈಶಾನ್ಯ ರಾಜ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂಬಂತೆ ಸರ್ಕಾರ ನಟಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಪ್ರಸಕ್ತ ತ್ರಿಪುರಾದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಆರೆಸ್ಸೆಸ್, ವಿ.ಎಚ್.ಪಿ ಮತ್ತು ಬಜರಂಗದಳ ನೇತೃತ್ವದ ಸಂಘಪರಿವಾರದ ದುಷ್ಕರ್ಮಿಗಳು 15 ಕ್ಕೂ ಅಧಿಕ ಮಸೀದಿ, ಹಲವಾರು ಮನೆಗಳು ಮತ್ತು ಮುಸ್ಲಿಮರ ಅಂಗಡಿಗಳನ್ನು ಸುಟ್ಟು ಧ್ವಂಸಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಸಂಘಪರಿವಾರದ ದುಷ್ಕರ್ಮಿಗಳ ತಂಡ ಬಾಂಗ್ಲಾದೇಶದ ಹಿಂಸಾಚಾರ ವಿರೋಧಿಸಿದ ನಡೆಸಿದ ಪ್ರತಿಭಟನೆಯಲ್ಲಿ ಮುಸ್ಲಿಮ್ ವಿರೋಧಿ ಘೋಷನೆ ಕೂಗುವುದರೊಂದಿಗೆ ಮಾರಾಕಾಯುಧ ಪ್ರದರ್ಶಿಸಿ ದಾಂಧಲೆ ನಡೆಸುತ್ತಿರುವ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Join Whatsapp