ತೀವ್ರ ಹೈಪೋಕ್ಸಿಯಾದಿಂದ ಬಳಲುತ್ತಿದ್ದ ಮಲಯಾಳಿ ಗರ್ಭಿಣಿಯ ಪ್ರಾಣ ಉಳಿಸಿದ ಮಂಗಳೂರು ವೈದ್ಯರು

Prasthutha|

ಮಂಗಳೂರು: ಅಪರೂಪದ ಖಾಯಿಲೆ ಹೈಪೋಕ್ಸಿಯಾದಿಂದ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿ ಮಲಯಾಳಿ ಮಹಿಳೆಯ ಪ್ರಾಣವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರು ರಕ್ಷಿಸಿದ್ದಾರೆ.

- Advertisement -

ಕೋವಿಡ್ ಜೊತೆಗೆ ತೀವ್ರವಾದ ನ್ಯುಮೋನಿಯಾದೊಂದಿಗೆ ಬಳಲುತ್ತಿದ್ದ 36 ವರ್ಷದ ಕೇರಳ ಮೂಲದ ಶರೀನಾ ಅವರು ಅಕ್ಟೋಬರ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ತುಂಬು ಗರ್ಭಿಣಿಯಾಗಿರುವುದರಿಂದ ಶರೀನಾ ಅವರ ಸ್ಥಿತಿ ಇನ್ನಷ್ಟು ಬಿಗಡಾಯಿಸತೊಡಗಿತ್ತು. ಆದರೆ, ಕೆಎಂಸಿ ಆಸ್ಪತ್ರೆಯ ಅತ್ಯಾಧುನಿಕ ಚಿಕಿತ್ಸೆ ಹಾಗೂ ತಜ್ಞ ವೈದ್ಯರ ನೆರವಿನಿಂದ ತಾಯಿ ಮತ್ತು ಮಗುವನ್ನು ರಕ್ಷಿಸಲಾಗಿದೆ.
ಗರ್ಭಾವಸ್ಥೆಯಲ್ಲಿ ಹೈಪೋಕ್ಸಿಯಾ ಬಾಧಿಸುವುದು ದೊಡ್ಡ ಸವಾಲಾಗಿದೆ ಎಂದು ಶರೀನಾ ಅವರ ಚಿಕಿತ್ಸೆಯ ನೇತೃತ್ವ ವಹಿಸಿರುವ ಕೆಎಂಸಿ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥರಾದ ಡಾ. ದತ್ತಾತ್ರೇಯ ಹೇಳಿದ್ದಾರೆ.

ಗರ್ಭಾವಸ್ಥೆಯಲ್ಲಿ ಕೋವಿಡ್ ನೊಂದಿಗೆ ನ್ಯುಮೋನಿಯಾ ಬಾಧಿಸುವುದು ಕೂಡ ವೈದ್ಯಕೀಯ ರಂಗಕ್ಕೆ ದೊಡ್ಡ ಸವಾಲಾಗಿದೆ. ಆದ್ದರಿಂದ, ತಾಯಿ ಮತ್ತು ಮಗುವಿನ ಜೀವ ಉಳಿಸುವುದು ನಮ್ಮ ಆದ್ಯತೆಯಾಗಿತ್ತು ಎಂದು ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ. ಹಾರೂನ್ ಎಚ್. ಹೇಳಿದರು.

- Advertisement -

ಇದೀಗ ಶರೀನಾ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದು, ಐದನೇ ದಿನಕ್ಕೆ ತಾಯಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ಸಲಹೆಗಾರರಾದ ಸಮೀನಾ ಎಚ್ ತಿಳಿಸಿದ್ದಾರೆ.

Join Whatsapp