ರೈಲ್ವೆಯಲ್ಲಿ ಕೋವಿಡ್ ಪೂರ್ವ ಟಿಕೆಟ್ ದರ ಪುನಾರಂಭಕ್ಕೆ ತೀರ್ಮಾನ

Prasthutha|

ಬೆಂಗಳೂರು ; ರೈಲ್ವೆಯಲ್ಲಿ ಕೋವಿಡ್ ಸಾಂಕ್ರಾಮಿಕ ಪೂರ್ವದಲ್ಲಿದ್ದ ರೈಲ್ವೆ ಟಿಕೆಟ್ ದರಗಳನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

- Advertisement -


ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಿಗೆ ವಿಶೇಷ ಟ್ಯಾಗ್ ಅಳವಡಿಕೆಯನ್ನು ನಿಲ್ಲಿಸಲು ಹಾಗೂ ಹಿಂದಿನ ರೈಲ್ವೆ ದರಗಳನ್ನು ಜಾರಿಗೊಳಿಸುವ ಕುರಿತು ರೈಲ್ವೆ ವಲಯ ಕಚೇರಿಗಳಿಗೆ ರೈಲ್ವೆ ಮಂಡಳಿ ಪತ್ರ ಬರೆದಿದೆ.
ಲಾಕ್ ಡೌನ್ ತೆರವುಗೊಳಿಸಿದ ನಂತರದಿಂದ ಈವರೆಗೆ ವಿಶೇಷ ರೈಲುಗಳ ಸಂಚಾರ ಮಾತ್ರ ಆರಂಭಿಸಲಾಗಿದೆ.

ದೂರದ ಮತ್ತು ಸಮೀಪದ ಮಾರ್ಗಗಳಿಗೆ ಸಂಚರಿಸುವ ರೈಲುಗಳಿಗೆ ವಿಶೇಷ ರೈಲುಗಳ ಮಾನ್ಯತೆ ನೀಡಲಾಗಿತ್ತು. ಇದರಿಂದ ಅಲ್ಪ ಪ್ರಮಾಣದಲ್ಲಿ ದರ ಏರಿಕೆಯಾಗಿ, ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆ ನಿವಾರಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.

Join Whatsapp