ಅಪಘಾತಕ್ಕೀಡಾದ ಯುವಕರ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ ಗೃಹ ಸಚಿವ

Prasthutha|

ಶಿವಮೊಗ್ಗ : ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು, ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯಿಂದ, ಜಿಲ್ಲಾ ಕೇಂದ್ರ ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ, ಮಂಡಗದ್ದೆ ಸಮೀಪ ಇಬ್ಬರು ಯುವಕರು, ತಾವು ಚಲಿಸುತ್ತಿದ್ದ ಬೈಕ್ ಅಪಘಾತವಾಗಿ,ರಸ್ತೆಯ ಪಕ್ಕದಲ್ಲಿ ಬಿದ್ದು, ನೋವಿನಿಂದ ನರಳುತ್ತಿರುವ ದೃಶ್ಯವನ್ನು ಗಮನಿಸಿ, ತಕ್ಷಣ ವಾಹನದಿಂದ ಇಳಿದು, ಗಾಯಾಳುಗಳನ್ನು ಉಪಚರಿಸಿದ್ದಲ್ಲದೆ, ಅವರನ್ನು ತಮ್ಮ ಎಸ್ಕಾರ್ಟ್ ವಾಹನದಲ್ಲಿ, ಆಸ್ಪತ್ರೆಗೆ ದಾಖಲಿಸಿದರು.

- Advertisement -


ತಾವು ಸವಾರಿ ಮಾಡುತ್ತಿದ್ದ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದ ಇಬ್ಬರು ಯುವಕರು, ರಕ್ತದ ಮಡುವಿನಲ್ಲಿ
ನೋವಿನಿಂದ ನರಳುತ್ತಿದ್ದು, ಸಚಿವರ ಸಕಾಲಿಕ ನೆರವಿನಿಂದ, ಆಸ್ಪತ್ರೆಗೆ ದಾಖಲಾಗಿ, ಚೇತರಿಸಿಕೊಳ್ಳುತ್ತಿದ್ದಾರೆ.


ಗಾಯಾಳುಗಲ್ಲಿ ಒಬ್ಬನಾದ ಸಂಪತ್, ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ
ಆಸ್ಪತ್ರೆಗೆ ದಾಖಲಾಗಿದ್ದಾನೆ ಹಾಗೂ, ಪ್ರಾಣಾಪಾಯದಿಂದ ಪಾರಾಗಿದ್ದು,
ಮತ್ತೊಬ್ಬ ಗಾಯಾಳು, ಸುಬ್ರಮಣ್ಯ, ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ, ಎಂದು
ತಿಳಿದು ಬಂದಿದೆ.ಸಂಕಷ್ಟದ ಸಮಯದಲ್ಲಿ, ಮಾನವೀಯತೆ ಮೆರೆದು, ತಮ್ಮ ರಕ್ಷಣೆಗೆ ಧಾವಿಸಿದ, ಗೃಹ ಸಚಿವರಿಗೆ,ಇಬ್ಬರೂ ಗಾಯಾಳುಗಳು, ಕೃತಜ್ಞತೆ ಸಲ್ಲಿಸಿದ್ದಾರೆ.

Join Whatsapp