2021-22ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

Prasthutha|

ಬೆಂಗಳೂರು: 2021-22ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ( SSLC) ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ.

- Advertisement -

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇಂದು(ಗುರುವಾರ) ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆಬ್ರವರಿ 21 ರಿಂದ 26 ರವರೆಗೆ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿವೆ. ಬೆಳಗ್ಗೆ 1.30ರಿಂದ ಮಧ್ಯಾಹ್ನ 1.45ರ ವರಗೆ ಪರೀಕ್ಷೆಗಳು ನಡೆಯಲಿವೆ.

ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಇಂತಿದೆ

- Advertisement -

*21-2-2022(ಪ್ರಥಮ ಭಾಷೆ: ಕನ್ನಡ, ತೆಲಗು, ತಮಿಳು, ಮರಾಠಿ, ಉರ್ದು, ಇಂಗ್ಲೀಷ್, ಸಂಸ್ಖ್ರತ,
*22-2-2022: ಸಮಾಜ ವಿಜ್ಞಾನ
*23-2-2022 (ದ್ವಿತೀಯ ಭಾಷೆ): ಇಂಗ್ಲೀಷ್, ಕನ್ನಡ
*24-2-2022: ಗಣಿತ
*25-2-2022(ತೃತೀಯ ಭಾಷೆ): ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಪರ್ಷಿಯನ್
*26-2-2022 (ಕೋರ್ ಸಬ್ಜೆಕ್ಟ್): ವಿಜ್ಞಾನ

ಮುಖ್ಯ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ

ಎಸ್‌ಎಸ್‌ಎಲ್‌ಸಿ(10ನೇ ತರಗತಿ) ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(Karnataka Secondary Education Examination Board) ಜ.06ರಂದು 2021-22ನೇ ಸಾಲಿನ 10ನೇ ತರಗತಿ (SSLC)ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ನಡೆಯಲಿವೆ.

Join Whatsapp