ದೆಹಲಿ ಮುಸ್ಲಿಮರ ನರಮೇಧ ; ಮೊದಲ ಆರೋಪಿಗೆ ಐದು ವರ್ಷಗಳ ಜೈಲು ಶಿಕ್ಷೆ

Prasthutha|

ಹೊಸದಿಲ್ಲಿ: 2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಮುಸ್ಲಿಮರ ಮೆಲೆ ನಡೆದ ನರಮೇಧಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಗಳಲ್ಲಿ ಮೊದಲ ಆರೊಪಿಗೆ ಶಿಕ್ಷೆ ಘೋಷಿಸಲಾಗಿದೆ. ದಿನೇಶ್ ಯಾದವ್ ಅವರಿಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ದಿನೇಶ್ ಯಾದವ್ ದೆಹಲಿ ಗಲಭೆ ಪ್ರಕರಣದಲ್ಲಿ ಮೊದಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದಾನೆ. ನ್ಯಾಯಾಲಯವು ಜೈಲು ಶಿಕ್ಷೆಯ ಜೊತೆಗೆ ರೂ.12,000 ದಂಡವನ್ನು ಸಹ ಆದೇಶಿಸಿದೆ.

- Advertisement -


ಶಿಕ್ಷೆಯ ವಿವರವಾದ ಆದೇಶವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕಳೆದ ತಿಂಗಳು 73 ವರ್ಷದ ಮಹಿಳೆಯ ಮನೆ ದರೋಡೆ ನಡೆಸಿ, ಬೆಂಕಿ ಹಾಕಿ ಸುಡುವ ಮೂಲಕ ಗಲಭೆಗೆ ಕಾರಣವಾದ ದಿನೇಶ್ ಯಾದವ್ ನನ್ನು ನ್ಯಾಯಾಲಯ ಆರೋಪಿ ಎಂದು ತೀರ್ಪು ನಿಡಿದೆ.

ಗೋಕುಲಪುರಿಯ ಭಾಗೀರಥಿ ವಿಹಾರ್ ನಲ್ಲಿ ವಾಸಿಸುತ್ತಿದ್ದ 73 ವರ್ಷದ ಮನೋರಿ ಎಂಬ ಮಹಿಳೆಯ ಮನೆಯನ್ನು ಆತನ ನಾಯಕತ್ವದಲ್ಲಿ ಸುಟ್ಟುಹಾಕಲಾಗಿತ್ತು. 2020 ಫೆಬ್ರವರಿ 25 ರಂದು ಸುಮಾರು 200 ಗಲಭೆಕೋರರು ಆಕೆಯ ಮನೆಯನ್ನು ಲೂಟಿ ಮಾಡಿ ಸುಟ್ಟುಹಾಕಿದರು ಎಂದು ಪ್ರಾಸಿಕ್ಯೂಷನ್ ಹೇಳಿದೆ.

- Advertisement -

ಮನೆಯ ಇತರ ಸದಸ್ಯರು ಹಾಜರಿರದ ಕಾರಣ ನ್ಯಾಯಾಲಯವು ಇಬ್ಬರು ಪೊಲೀಸ್ ಅಧಿಕಾರಿಗಳ ಹೇಳಿಕೆಗಳನ್ನು ಪರಿಗಣಿಸಿದೆ. ಆರೋಪಿ ದಿನೇಶ್ ಯಾದವ್ ದುಷ್ಕರ್ಮಿಗಳ ಗುಂಪಿನಲ್ಲಿದ್ದ. ಆದರೆ ಮನೆಯನ್ನು ಸುಟ್ಟುಹಾಕುವುದನ್ನು ನೋಡಲಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.


ದುಷ್ಕರ್ಮಿಗಳ ಗುಂಪಿನಲ್ಲಿದ್ದ ಕಾರಣ ಮನೆಯನ್ನು ಸುಟ್ಟ ರೋಪವನ್ನೂ ಹೊರಬೇಕಾಗುತ್ತದೆ ಎಂದು ದೆಹಲಿಯ ಕರ್ಕರ್ದುಮಾ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಫೆಬ್ರವರಿ 25ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ 150ರಿಂದ 200 ಗಲಭೆಕೋರರ ಗುಂಪು ಮನೆಯ ಮೇಲೆ ದಾಳಿ ಮಾಡಿ ಹಲವಾರು ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದೆ ಎಂದು ಮನೋರಿ ದೂರಿದ್ದಾರೆ.


ಪ್ರಾಣ ಉಳಿಸಿಕೊಳ್ಳಲು ಮನೆಯ ಮೇಲಿನಿಂದ ಜಿಗಿಯಬೇಕಾಯಿತು. ತನ್ನ ನೆರೆಹೊರೆಯವರ ಮನೆಯಲ್ಲಿ ಅಡಗು ಕುಳಿತುಕೊಳ್ಳಬೇಕಾಯಿತು ಎಂದು ಮನೋರಿ ನ್ಯಾಯಾಲಯದಲ್ಲಿ ವಿವರಿಸಿದರು.

Join Whatsapp