Each 1 Reach 10: ನಾಳೆ ‘ಪ್ರಸ್ತುತ’ ಚಾನೆಲ್ Subscribers ಅಭಿಯಾನ

Prasthutha|

Each 1 Reach 10 ಎಂಬ ಘೋಷಣೆಯೊಂದಿಗೆ ದಿನಾಂಕ 29-11-2020ರಂದು ‘ಪ್ರಸ್ತುತಯೂಟ್ಯೂಬ್ ಚಾನೆಲ್ ನ Subscribers ಅಭಿಯಾನ ನಡೆಯಲಿದೆ. ಸುದ್ದಿಯಾಚೆಗಿನ ಸತ್ಯವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವುದಕ್ಕಾಗಿ ಈ ಅಭಿಯಾನವನ್ನು ಯಶಸ್ಸುಗೊಳಿಸಬೇಕೆಂದು ‘ಪ್ರಸ್ತುತ’ ತಂಡವು ಕೋರುತ್ತಿದೆ. ಪ್ರತಿಯೊಬ್ಬರೂ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಆಪ್ತವರ್ಗವನ್ನು ಪ್ರಸ್ತುತ ಯೂಟ್ಯೂಬ್ ಚಾನೆಲ್ ನ Subscribe ಮಾಡಿಸುವ ಮೂಲಕ ಸತ್ಯದ ಧ್ವನಿಯು ಎಲ್ಲೆಡೆಗೆ ತಲುಪಲು ನೆರವಾಗಬೇಕೆಂಬುದು ನಮ್ಮ ಕೋರಿಕೆ.

- Advertisement -

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಂಡವಾಳಶಾಹಿ ಮಾಲಕತ್ವದ ಬಹುತೇಕ ದೃಶ್ಯ ಮಾಧ್ಯಮಗಳು ಆಡಳಿತ ಪಕ್ಷದ ವಕ್ತಾರಿಕೆಯ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆಡಳಿತ ವರ್ಗಗಳಿಗೆ ಮುಳ್ಳಾಗಬಲ್ಲ ದುರ್ಬಲ ವರ್ಗಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ವ್ಯವಸ್ಥಿತವಾಗಿ ಮರೆಮಾಚಲಾಗುತ್ತದೆ. ಆಯ್ದ ಸುದ್ದಿಗಳನ್ನಷ್ಟೇ ಜನರ ಮಧ್ಯೆ ಹಂಚಲಾಗುತ್ತದೆ. ಸುದ್ದಿ ಭಯೋತ್ಪಾದನೆಯ ಅಪಾಯವನ್ನು ಮನಗಂಡು ಹುಟ್ಟಿಕೊಂಡ ಕನ್ನಡದ ಕೆಲವು ಮಾಧ್ಯಮಗಳಲ್ಲಿ ‘ಪ್ರಸ್ತುತ” ಚಾನೆಲ್ ಕೂಡ ಒಂದು.

ಪ್ರಾರಂಭವಾದಂದಿನಿಂದಲೂ ‘ಪ್ರಸ್ತುತ’ ನ್ಯೂಸ್ ಬುಲೆಟಿನ್ ರಾಜ್ಯದ ಬಹುತೇಕ ದೃಶ್ಯಮಾಧ್ಯಮಗಳು ಆಯಲು ಕಹಿಪಡುವ ಸುದ್ದಿಗಳನ್ನು ಹೆಕ್ಕಿ ಜನರ ಮುಂದಿಡಲು ಪ್ರಯತ್ನಿಸಿದೆ. News & Views ಕಾರ್ಯಕ್ರಮದ ಮೂಲಕ ಸುದ್ದಿಯಾಚೆಗೆ ಇಣುಕಿ ವಸ್ತು ನಿಷ್ಠ ವಿಶ್ಲೇಷಣೆಯನ್ನು ಜನರ ಮುಂದಿಡುತ್ತಿದೆ. ‘ಪ್ರಸ್ತುತ ವಿದೇಶ ವಾರ್ತೆ’ಗಳು  ಮರೆಗೆ ಸರಿಸಲಾದ ಸಾಮ್ರಾಜ್ಯಶಾಹಿ ಸುದ್ದಿ, ಭಾರತೀಯ ಅನಿವಾಸಿಗಳ ಸುದ್ದಿ, ಗಲ್ಫ್ ರಾಷ್ಟಗಳ ಆಗುಹೋಗುಗಳನ್ನು ವೀಕ್ಷಕರಿಗೆ ತಲುಪಿಸುತ್ತಿದೆ. ಬೆಳೆಯುವ ಮಕ್ಕಳನ್ನು ಮೊಳಕೆಯಲ್ಲೇ ಹದಗೊಳಿಸಿ ಬೆಳೆಸುವ ಕುರಿತ “ಬೆಳೆಯುವ ಪೈರು” ಕಾರ್ಯಕ್ರಮ ವೀಕ್ಷಕರ ಗಮನಸೆಳೆದಿದೆ.

- Advertisement -

ಮಾಧ್ಯಮ ಲೋಕದಲ್ಲಿ ಸಾಧಿಸಬೇಕಾದದ್ದು ಇನ್ನೂ ಇದೆಯಾಗಿರುವುದರಿಂದಪ್ರಸ್ತುತ” ಈ ಅಭಿಯಾನದ ಯಶಸ್ಸಿಗೆ ನಿಮ್ಮ ಬೆಂಬಲವನ್ನು ಕೋರುತ್ತದೆ.

https://www.youtube.com/channel/UCVCe1ZDFuUWxt0KOW8hy6ig



Join Whatsapp