ಉದ್ರೇಕಕಾರಿ ಭಾಷಣ | ಅಕ್ಬರುದ್ದೀನ್ ಒವೈಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ವಿರುದ್ಧ ಕೇಸ್

Prasthutha|

ಹೈದರಾಬಾದ್ : ಜಿಎಚ್ ಎಂಸಿ ಚುನಾವಣಾ ಪ್ರಚಾರದ ವೇಳೆ ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಒವೈಸಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಬ್ಬರು ನಾಯಕರ ಭಾಷಣದ ವಿಷಯದಲ್ಲೂ ಪೊಲೀಸರು ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದ್ದಾರೆ. ಸಂಜೀವ್ ರೆಡ್ಡಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ ಐಆರ್ ಗಳು ದಾಖಲಾಗಿವೆ.

- Advertisement -

ಹುಸೇನ್ ಸಾಗರ ಸರೋವರದಲ್ಲಿ 4,700 ಎಕರೆ ಭೂಮಿಯಿದ್ದು, ಅದರಲ್ಲಿ ಈಗ 700 ಎಕರೆ ಭೂಮಿ ಮಾತ್ರ ಉಳಿದಿದೆ. ಅದರಲ್ಲಿ ಕೆಲವು ನಾಯಕರ ಸಮಾಧಿಗಳು, ರಸ್ತೆ, ಉದ್ಯಾನವನ ಮಾಡಲಾಗಿದೆ. ಇವೆಲ್ಲದ್ದಕ್ಕೆ ಅದನ್ನು ನೀಡಬಹುದಾದರೆ, ಜನರಿಗೆ ಯಾಕೆ ನೀಡುವುದಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ, ಇವುಗಳನ್ನೆಲ್ಲ ಒಡೆದು ಹಾಕುವುದಾಗಿ ಅಕ್ಬರುದ್ದೀನ್ ಒವೈಸಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸಂಜಯ್ ಕುಮಾರ್, ಬಿಜೆಪಿ ಕಾರ್ಯಕರ್ತರು ದಾರುಸಲಾಂ (ಎಐಎಂಐಎಂ ಪಕ್ಷದ ಕಚೇರಿ)ಯನ್ನು ಎರಡು ಗಂಟೆಗಳಲ್ಲಿ ಧ್ವಂಸ ಮಾಡುತ್ತಾರೆ ಎಂದು ಹೇಳಿದ್ದರು. ಈ ಇಬ್ಬರು ನಾಯಕರ ಹೇಳಿಕೆಗಾಗಿ ಇದೀಗ ಪ್ರಕರಣ ದಾಖಲಾಗಿದೆ.

- Advertisement -