ರೈತರ ‘ದೆಹಲಿ ಚಲೋ’ | ಜಂತರ್ ಮಂತರ್ ನಲ್ಲೇ ಪ್ರತಿಭಟನೆಗೆ ಅವಕಾಶ ನೀಡುವಂತೆ ಪಟ್ಟು

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ಉತ್ತರ ಭಾರತದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಇದೀಗ ದೆಹಲಿಯಲ್ಲಿ ತೀವ್ರತೆಯನ್ನು ಪಡೆದಿದೆ. ಆದರೆ, ದೆಹಲಿ ಗಡಿ ಸಮೀಪಿಸಿರುವ ಪ್ರತಿಭಟನಕಾರರು, ಸರಕಾರ ಸೂಚಿಸಿರುವ ಪ್ರತಿಭಟನಾ ತಾಣಕ್ಕೆ ತೆರಳಲು ನಿರಾಕರಿಸಿದ್ದಾರೆ.

- Advertisement -

ದೆಹಲಿಯ ಬುರಾರಿಯ ನಿರಂಕಾರಿ ಸಮಾಗಮ್ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ರೈತರಿಗೆ ಸರಕಾರ ಅನುಮತಿ ನೀಡಿದೆ. ಆದರೆ, ರೈತರು ಇಲ್ಲಿ ಪ್ರತಿಭಟನೆ ನಡೆಸಲು ನಿರಾಕರಿಸಿದ್ದಾರೆ. ಜಂತರ್ ಮಂತರ್ ನಲ್ಲೇ ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕೆಂದು ಅವರು ಪಟ್ಟು ಹಿಡಿದಿದ್ದಾರೆ.

ಸಿಂಘು ಮತ್ತು ತಿಕ್ರಿ ಗಡಿಯಲ್ಲಿಯೇ ರೈತರು ತಂಗಿದ್ದು, ಪ್ರತಿಭಟನಾ ಸ್ಥಳ ಬದಲಾಯಿಸುವಂತೆ ಆಗ್ರಹಿಸಿದ್ದಾರೆ.

- Advertisement -

ಇನ್ನೊಂದೆಡೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ರೈತರು ದೆಹಲಿ ಚಲೋ ಪಾದಯಾತ್ರೆ ಮುಂದುವರಿಸಿದ್ದು, ದೆಹಲಿಯತ್ತ ಸಾಗಿಬರುತ್ತಿದ್ದಾರೆ.



Join Whatsapp