ಶಾಸಕ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಪ್ರಹ್ಲಾದ ಜೋಶಿ

Prasthutha|

ಬೆಂಗಳೂರು: ಶಾಸಕ ಎಸ್.ಎಲ್.ಭೋಜೇಗೌಡ
ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಹೇಳಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಭೋಜೇಗೌಡ ಅವರು ಪ್ರದರ್ಶಿಸಿರುವ ಪತ್ರವನ್ನು
ವೈದ್ಯರೊಬ್ಬರಿಗೆ ಬರೆಯಲಾಗಿತ್ತು. ನಾನು ವೈದ್ಯ ಅಲ್ಲ. ಅವರು ಆರೋಪಿಸಿದಂತಹ ವ್ಯಕ್ತಿ ನನ್ನ ಕಚೇರಿಯಲ್ಲೂ ಇಲ್ಲ. ಅವರಿಗೆ ದಾಖಲೆಯ ಮೇಲೆ ಅಷ್ಟೊಂದು ವಿಶ್ವಾಸವಿದ್ದರೆ ಹೆಸರನ್ನು ಏಕೆ ಅಡಗಿಸಿಡಲಾಗಿದೆ’ ಎಂದು ಪ್ರಶ್ನಿಸಿದ್ದಾರೆ.

‘ಇಂತಹ ಆಧಾರರಹಿತ ಆರೋಪಗಳನ್ನು ಗಂಭೀರವಾಗಿ ಎದುರಿಸಲಾಗುವುದು. ನನ್ನ ವ್ಯಕ್ತಿತ್ವದ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದಿರುವ ಅವರು, ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರು ಡಾ.ಬಿ.ಡಿ. ಪಾಂಡೆ ಎಂಬುವವರಿಗೆ ಬರೆದಿದ್ದ ಪತ್ರವನ್ನು ಹಂಚಿಕೊಂಡಿದ್ದಾರೆ.

- Advertisement -

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ ಎಂದು
ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಆರೋಪಿಸಿದ್ದರು.

Join Whatsapp