ಬಾಳೆಪುಣಿ ಪಂಚಾಯತ್ ಸದಸ್ಯನ ಪ್ರಾಮಾಣಿಕತೆ| ದಾರಿಯಲ್ಲಿ ಸಿಕ್ಕ 9 ಪವನ್ ಚಿನ್ನ ವಾರಸುದಾರರಿಗೆ ಮರಳಿಸಿದ ಹನೀಫ್

Prasthutha|

ಉಳ್ಳಾಲ: ದಾರಿಯಲ್ಲಿ ಸಿಕ್ಕ 9 ಪವನ್ ಚಿನ್ನದ ನೆಕ್ಲೇಸ್ ಅನ್ನು ವಾರಸುದಾರರಿಗೆ ಮರಳಿಸಿ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ H.ಕಲ್ಲು ಮಾನವೀಯತೆ ಮೆರೆದಿದ್ದಾರೆ.

- Advertisement -

ಹಲವಾರು ವರ್ಷಗಳಿಂದ ಸದ್ದಿಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಪರೂಪದ ಸಮಾಜ ಸೇವಕ ಹನೀಫ್ ಅವರು ಬಾಳೆಪುಣಿ ಗ್ರಾಮದ ನಾಲ್ಕನೇ ವಾರ್ಡಿನ ಸದಸ್ಯರಾಗಿದ್ದಾರೆ.

ಬಡವರ ಪಾಲಿಗೆ ಆಪತ್ಬಾಂಧವ

- Advertisement -

ಆರ್ಥಿಕವಾಗಿ ಹಿಂದುಳಿದ ಅದೆಷ್ಟೋ ರೋಗ ಪೀಡಿತ ಜನರ ಚಿಕಿತ್ಸೆಗಾಗಿ ತನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಅವರ ಯೋಗಕ್ಷೇಮ ನೋಡಿಕೊಂಡಿರುವ ಹನೀಫ್, ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದಾರೆ.

Join Whatsapp