ಸಂಘಪರಿವಾರವಾರ ಪ್ರೇರಿತ ಈಡಿ ದಾಳಿಯ ಮೂಲಕ ಪಾಪ್ಯುಲರ್ ಫ್ರಂಟ್ ಅನ್ನು ಬೆದರಿಸಲಾಗದು : ಡಾ. ಸಿ.ಟಿ. ಸುಲೈಮಾನ್

Prasthutha|

ಕಾಸರಗೋಡು : ಕೋಮುಗಲಭೆ ಮತ್ತು ಮತೀಯ ಧ್ರುವೀಕರಣದ ಮೂಲಕ ಧೇಶವನ್ನು ವಿಭಜಿಸಿ, ರಾಜಕೀಯ ಎದುರಾಳಿಗಳನ್ನು ತನಿಖಾ ತಂಡಗಳನ್ನು ಉಪಯೋಗಿಸಿ ದಮನಿಸಲು ಸಂಘಪರಿವಾರ ಷಡ್ಯಂತ್ರ ನಡೆಸುತ್ತಿದೆ ಎಂದು ಪಾಪ್ಯುಲರ್ ಪ್ರಂಟ್ ಕಾಸರಗೋಡು ಜಿಲ್ಲಾಧ್ಯಕ್ಷರಾದ ಡಾ. ಸಿ.ಟಿ. ಸುಲೈಮಾನ್ ಹೇಳಿದರು.

- Advertisement -

‘ಈಡಿ ಆರೆಸ್ಸೆಸ್ ಅಸ್ತ್ರವಾಗುವುದನ್ನು ತಡೆಯೋಣ’ ಎಂಬ ಘೋಷಣೆಯೊಂದಿಗೆ ಅಡಳಿತ ವರ್ಗದ ಭಯೋತ್ಪಾದನೆಗೆದುರಾಗಿ ರಾಷ್ಟ್ರಾಧ್ಯಂತ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾಸರಗೋಡು ಜಿಲ್ಲಾ ಸಮಿತಿ; ಕಾಸರಗೋಡು ಹೊಸ ಬಸ್ಸು ನಿಲ್ದಾಣದ ಪರಿಸರದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ ಮೂರು ದಶಕಗಳಿಂದ ಪಾಪ್ಯುಲರ್ ಫ್ರಂಟಿನ ವಿರುದ್ಧ ಕಟ್ಟುಕಥೆಗಳನ್ನು ಹೆಣೆದು, ಅದರ ಮುಂದುವರಿಕೆಯೆಂಬಂತೆ ತನಿಖಾ ತಂಡಗಳ ದುರುದ್ದೇಶಪೂರಿತ ಮತ್ತು ಪೂರ್ವಾಗ್ರಹಪೀಡಿತ ದಾಳಿ, ಅರೆಸ್ಟ್ ಗಳು ನಿರಂತರ ನಡೆಯುತ್ತಿದ್ದರೂ; ಈ ವರೆಗೂ ಸಂಘಟನೆಯ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲಾಗಿಲ್ಲ. ಸಂಘಪರಿವಾರವು ದಲಿತ, ಆದಿವಾಸಿ ಜನರನ್ನು ಗುಲಾಮಗಿರಿಯತ್ತ ತಳ್ಳುತ್ತಿರುವ ಹಾಗೆ ಮುಸ್ಲಿಮರನ್ನೂ ನವ ಕರಾಳ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದಮನಿಸಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.

- Advertisement -

ಸಿ.ಎ.ಎ. ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾರಣ ಸಂಘಟನೆಯನ್ನು ಗುರಿಪಡಿಸಲಾಗುತ್ತಿದೆ. ಕಾನೂನಿನ ಚೌಕಟ್ಟಿನೊಳಗೆ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ಪಾಪ್ಯುಲರ್ ಫ್ರಂಟ್ ಅನ್ನು; ಈಡಿಯಂತಹಾ ತನಿಖಾ ತಂಡಗಳನ್ನು ಉಪಯೋಗಿಸಿ ಭಯಪಡಿಸಬಹುದೆಂಬುದು ಸಂಘಪರಿವಾರದ ಭ್ರಮೆ ಮಾತ್ರವಾಗಿದೆಯೆಂದೂ ಅವರು ಹೇಳಿದರು.

ಪುಲಿಕ್ಕುನ್ನು ನಿಂದ ಆರಂಭವಾದ ಪ್ರತಿಭಟನಾ ರ್ಯಾಲಿ ಹೊಸ ಬಸ್ಸು ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.

ನೂರಾರು ಕಾರ್ಯಕರ್ತರು ಭಾಗವಹಿಸಿದ ಪ್ರತಿಭಟನಾ ರ್ಯಾಲಿಯಲ್ಲಿ ಕೇಂದ್ರ ಸರಕಾರದ ಕೈಗೊಂಬೆಗಳಾದ ತನಿಖಾ ಏಜೆನ್ಸಿಗಳ ವಿರುದ್ಧ ಆಕ್ರೋಶ ಹೊರಹಾಕಲಾಯಿತು.

ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಡಾ. ಸಿ.ಟಿ. ಸುಲೈಮಾನ್, ಜಿಲ್ಲಾ ಸಮಿತಿ ಸದಸ್ಯರಾದ ಅಲಿ ಮೀಯಪದವು, ಶಬೀರ್ ಮಂಜೇಶ್ವರ, ಬಶೀರ್ ನೆಲ್ಲಿಕ್ಕುನ್ನು, ಸಿರಾಜ್ ಅಡ್ಕ ಮುಂತಾದವರು ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಿದ್ದರು.



Join Whatsapp