ಈಡಿಯಿಂದ ಕ್ಯಾಂಪಸ್ ಫ್ರಂಟ್ ನಾಯಕನ ಬಂಧನ: ರಾಜ್ಯಾಧ್ಯಕ್ಷರ ಖಂಡನೆ

Prasthutha|

 ಮೈಸೂರು: ಕ್ಯಾಂಪಸ್ ಫ್ರಂಟ್  ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೌಫ್ ಶರೀಫ್ ರನ್ನು ತಿರುವನಂತಪುರಂ  ವಿಮಾನ ನಿಲ್ದಾಣದಿಂದ ಈ ಡಿ ಅಧಿಕಾರಿಗಳು

- Advertisement -

ಬಂಧಿಸಿರುವ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ತೀವ್ರವಾಗಿ ಖಂಡಿಸಿದೆ.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, “ಸಂಘ ಪರಿವಾರದ ವಿರುದ್ಧ ಧ್ವನಿ ಎತ್ತುವವರನ್ನು  ಮತ್ತು ರಾಜಕೀಯ ವಿರೋಧಿಗಳನ್ನು ಬೇಟೆಯಾಡಲು ಕೇಂದ್ರ ಸರ್ಕಾರ ಇಡಿಯನ್ನು ದುರುಪಯೋಗ ಪಡಿಸುತ್ತಿದೆ. ಸರ್ಕಾರಿ ಸಂಸ್ಥೆಗಳು ಸಂಘ ಪರಿವಾರದ ದಾಳಗಳಾಗದಂತೆ ತಡೆಯುವ ಜವಾಬ್ದಾರಿ ಪ್ರಜಾಪ್ರಭುತ್ವವಾದಿಗಳಿಗಿದೆ. ಸಿಎಎ-ಎನ್‌ಆರ್‌ಸಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಕ್ಯಾಂಪಸ್ ಫ್ರಂಟ್ ನಾಯಕರನ್ನು ಬೇಟೆಯಾಡಲಾಗುತ್ತಿದೆ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದರು.

- Advertisement -

“ರೌವೂಫ್ ಅವರ ಬಂಧನದ ನಂತರ ಅವರ ಮನೆಗೆ  ನಡೆಸಿದ  ದಾಳಿಯಲ್ಲಿ ಏನೂ  ಸಿಗಲಿಲ್ಲ ಎಂದು ಈಡಿ ಅಧಿಕಾರಿಗಳು ಹೇಳಿದ್ದರು. ವರದಿಯಲ್ಲಿ ‘Nill’ಎಂದು ಬರೆದಿರವುದು ಇದಕ್ಕೆ ಸಾಕ್ಷಿಯಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಸಿಎಎ-ಎನ್‌ಆರ್‌ಸಿ ಅನುಷ್ಠಾನಕ್ಕೆ ಮುನ್ನ ಸಂಘ ಪರಿವಾರವನ್ನು ವಿರೋಧಿಸುತ್ತಿರುವ ನಾಯಕರು ಮತ್ತು ಚಳುವಳಿಗಳನ್ನು ಬೆದರಿಸುವುದು ಬಿಜೆಪಿಯ ಉದ್ದೇಶವಾಗಿದೆ. ಈಡಿ ತಕ್ಷಣವೇ ರೌಫ್ ಶರೀಫ್ ರನ್ನು ಬಿಡುಗಡೆಗೊಳಿಸಬೇಕು” ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಕಲೀಮ್ ತುಮಕೂರು, ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ರಿಯಾಝ್ ಉಪಸ್ಥಿತರಿದ್ದರು.

Join Whatsapp