ತಲವಾರು ಸಹಿತ ಮಸ್ಜಿದ್ ಗೆ ನುಗ್ಗಲು ಯತ್ನ: ಪ್ರಕರಣದ ಸತ್ಯಾಂಶ ಬಹಿರಂಗ ಪಡಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

ಬಂಟ್ವಾಳ: ಮಾರಕಾಸ್ತ್ರ ಹೊಂದಿದ್ದ ದುಷ್ಕರ್ಮಿಯೊಬ್ಬ ಕಳೆದ ರಾತ್ರಿ ಬಿ.ಸಿ.ರೋಡ್ ಸಮೀಪದ ಮಿತ್ತಬೈಲು ಮಸ್ಜಿದ್ ಗೆ ನುಗ್ಗಲು ಯತ್ನಿಸಿದ್ದು, ಇದರ ಹಿಂದಿರುವ ಷಡ್ಯಂತರವನ್ನು ಪೊಲೀಸರು ಕೂಡಲೇ ಬಹಿರಂಗ ಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಬಂಟ್ವಾಳ ವಲಯ ಅಧ್ಯಕ್ಷ ಸಲೀಂ ಕುಂಪನಮಜಲು ಆಗ್ರಹಿಸಿದ್ದಾರೆ.

- Advertisement -

ಪ್ರಸಕ್ತ ದಿನಗಳಲ್ಲಿ ವಿವಿಧೆಡೆಗಳಲ್ಲಿ ಮುಸ್ಲಿಮರು ಮತ್ತು ಅವರ ಮಸೀದಿ ಹಾಗೂ ದರ್ಗಾಗಳನ್ನು ವ್ಯಾಪಕವಾಗಿ ಗುರಿಪಡಿಸಲಾಗುತ್ತಿದೆ. ಇದೀಗ ಮಾರಕಾಸ್ತ್ರದೊಂದಿಗೆ ಮಸ್ಜಿದ್ ಗೆ ನುಗ್ಗಲು ಯತ್ನಿಸಿರುವ ಘಟನೆಯನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಷಡ್ಯಂತರ ಅಡಗಿರುವುದು ಕಂಡು ಬರುತ್ತಿದೆ. ಸಮಾಜದಲ್ಲಿ ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಸಲೀಂ ಕುಂಪನಮಜಲು ಒತ್ತಾಯಿಸಿದ್ದಾರೆ.

Join Whatsapp