ಮಾ.8ರಂದು ಕೆಸಿಸಿ ವತಿಯಿಂದ ಹೊರಡಲಿದೆ ಕರ್ನಾಟಕದ ಮೊದಲ ಉಮ್ರಾ ಬ್ಯಾಚ್

Prasthutha|

ಮಂಗಳೂರು: ಸೌದಿಯಲ್ಲಿ ಕೋವಿಡ್-ಲಾಕ್‌ ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಪವಿತ್ರ ಉಮ್ರಾ ಯಾತ್ರೆಯೂ ಪುನಾರಂಭಗೊಂಡಿದ್ದು, ಕರ್ನಾಟಕದಿಂದ ಮೊದಲ ಬ್ಯಾಚ್ ಮಾರ್ಚ್ 8ರಂದು ಮುಂಜಾನೆ ಹೊರಡಲಿದೆ.

- Advertisement -

ಕರ್ನಾಟಕದ ಪತಿಷ್ಠಿತ ಕೆಸಿಸಿ ಟ್ರಸ್ಟ್ ವತಿಯಿಂದ ರಾಜ್ಯದ ಮೊದಲ ಬ್ಯಾಚ್ ಪವಿತ್ರ ಉಮ್ರಾ ಕೈಗೊಳ್ಳಲಿದೆ. ಸೌದಿ ವಿದೇಶಿಗಳಿಗೆ ಉಮ್ರಾ ಯಾತ್ರೆಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಇತ್ತೀಚೆಗೆ ಹಿಂಪಡೆಯಲಾಗಿತ್ತು. ಕಳೆದ ವರ್ಷ ನವೆಂಬರ್ ಒಂದರಿಂದ ಭಾಗಶಃವಾಗಿ ಉಮ್ರಾ ಯಾತ್ರೆಗೆ ಅನುಮತಿ ನೀಡಲಾಗಿತ್ತು.

Join Whatsapp