ಮಂಗಳೂರು ಪೊಲೀಸ್ ಆಯುಕ್ತರ ಕರೆಗೆ ಸೈ ಎಂದ ದ.ಕ ಜಿಲ್ಲೆಯ ಯುವಜನತೆ | ಪೊಲೀಸ್ ನೇಮಕಾತಿಗೆ ಸಾಲುಗಟ್ಟಿನಿಂತ ಯುವಕ ಯುವತಿಯರು

Prasthutha|

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರುವಂತೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ನೀಡಿದ ಕರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪೊಲೀಸ್ ಸೇವೆಗೆ ದಕ್ಷಿಣ ಕನ್ನಡದವರ ಸಂಖ್ಯೆ ಕಡಿಮೆ ಇರುವುದರ ವಿಚಾರವಾಗಿ ಮಂಗಳೂರು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಉಚಿತವಾಗಿ ತರಬೇತಿ ಶಿಬಿರ ಏರ್ಪಡಿಸಿ, ಅದರಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಆಯುಕ್ತರ ಕರೆಗೆ ಜಿಲ್ಲೆಯ ಯುವಕ ಯುವತಿಯರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದ್ದು 400 ಕ್ಕೂ ಅಧಿಕ ಯುವಕ ಯುವತಿಯರು ಪೊಲೀಸ್ ಮೈದಾನದಲ್ಲಿ ಜಮಾವಣೆಗೊಂಡಿದ್ದಾರೆ.

- Advertisement -


ಪೊಲೀಸ್ ಇಲಾಖೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುವಕರ ಸಂಖ್ಯೆ ಇಳಿಕೆಯಾಗಿದ್ದನ್ನು ಮನಗಂಡ ಮಂಗಳೂರು ಪೊಲೀಸ್ ಆಯುಕ್ತರು , ಈ ಬಗ್ಗೆ ವಿಶೇಷ ಯೋಜನೆಯನ್ನು ರೂಪಿಸಿದ್ದರು. ಜಿಲ್ಲೆಯ ಯುವಕರಿಗೆ ಮೊದಲನೆ ಆದ್ಯತೆ ನೀಡಲಾಗಿದ್ದು ಇದೀಗ ಆಯುಕ್ತರ ಯೋಜನೆಗೆ ಯುವ ಪೀಳಿಗೆಗಯಿಂದ ಉತ್ತಮ ಸ್ಪಂದನೆ ದೊರಕಿದೆ. ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿ ಹಿಂಭಾಗದ ಮೈದಾನದಲ್ಲಿ ನೋಂದಣಿ ಕಾರ್ಯ ನಡೆಯುತ್ತಿದೆ.



Join Whatsapp