ವೇಶ್ಯಾವಾಟಿಕೆ ಕೇಂದ್ರಗಳಿಗೆ ಪೊಲೀಸ್ ರೈಡ್; ಎಂಟು ಮಹಿಳೆಯರ ರಕ್ಷಣೆ

Prasthutha|

ಬೆಂಗಳೂರು: ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಇಂದಿರಾನಗರ ಹಾಗೂ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯ ಸ್ಪಾಗಳ ಮೇಲೆ ದಾಳಿ ಮಾಡಿರುವ  ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ಧಾರೆ.

- Advertisement -

 ‘ಜೆ.ಪಿ.ನಗರ 5ನೇ ಹಂತದ ಎಸ್‌ಎನ್‌ಬಿಆರ್ ಕಾಂಪ್ಲೆಕ್ಸ್‌ನಲ್ಲಿರುವ ‘ರೂಹಿ ಥೈ’ ಹಾಗೂ ಇಂದಿರಾನಗರ 100 ಅಡಿ ರಸ್ತೆಯಲ್ಲಿರುವ ‘ಐರಾ’ ಸ್ಪಾ ಮೇಲೆ ದಾಳಿ ನಡೆಸಿ ಎಂಟು ಮಹಿಳೆಯರನ್ನು ರಕ್ಷಿಸಲಾಗಿದೆ.

 ‘ಥಾಯ್ಲೆಂಡ್‌ ಹಾಗೂ ಇತರ ಕಡೆಗಳಿಂದ ಮಹಿಳೆಯರಿಗೆ ಉದ್ಯೋಗದ ಆಮಿಷವೊಡ್ಡಿ ನಗರಕ್ಕೆ ಕರೆಸಿಕೊಂಡು, ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು. ಮಸಾಜ್‌ ಹೆಸರಿನಲ್ಲಿ ಗ್ರಾಹಕರನ್ನು ಆಹ್ವಾನಿಸಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು.  ಮೂವರು ಕೆಲಸಗಾರರು ಹಾಗೂ ನಾಲ್ವರು ಗ್ರಾಹಕರನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Join Whatsapp