ಚಿಕ್ಕಮಗಳೂರು: ಮಲೆನಾಡಲ್ಲಿ ಮುಂದುವರಿದ ಮಳೆ ಅವಾಂತರ

Prasthutha|

ಮೂಡಿಗೆರೆ: ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು, ಹಲವು ನಾಶ ನಷ್ಟಗಳು ಸಂಭವಿಸಿವೆ.

- Advertisement -

ಧಾರಾಕಾರವಾಗಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಅಲ್ಲಲ್ಲಿ ಭೂ ಕುಸಿತವುಂಟಾಗುತ್ತಿದೆ.

ಮೂಡಿಗೆರೆ ತಾಲೂಕಿನ ಬಾಳೂರು ಹ್ಯಾಂಡ್ ಪೋಸ್ಟ್ ಬಳಿ ಇರುವ ಡಾಲ್ಫಿ ಡಿಸೋಜಾ ರ ಮನೆಯ ಕೆಳಭಾಗದಲ್ಲಿ ಧರೆ ಕುಸಿತವುಂಟಾಗಿದ್ದು, ಮನೆ ಕುಸಿದು ಬಿಳುವ ಹಂತಕ್ಕೆ ತಲುಪಿದೆ. ಇಂದೋ ನಾಳೆಯೋ ಕುಸಿಯೋ ಭೀತಿಯಲ್ಲಿರುವ ಕುಟುಂಬ ಅತಂಕದೊಂದಿಗೆ ದಿನ ದೂಡುವಂತಾಗಿದೆ.

Join Whatsapp