ನಿವೃತ್ತಿ ದಿನವೇ ಕೋವಿಡ್ ಸೋಂಕಿಗೆ ಬಲಿಯಾದ ಪೊಲೀಸ್ ಅಧಿಕಾರಿ!
Prasthutha: June 30, 2021

ವಿಜಯನಗರ: ಇಂದು(ಜೂನ್ 30) ನಿವೃತ್ತಿ ಹೊಂದಬೇಕಾಗಿದ್ದ PSI ಕೋವಿಡ್ ಸೋಂಕಿಗೆ ಬಲಿಯಾದ ದಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಯಲ್ಲಪ್ಪ ಕದ್ರಳ್ಳಿ(60) ಕೋವಿಡ್ ನಿಂದ ಮೃತಪಟ್ಟ ಪೊಲೀಸ್ ಅಧಿಕಾರಿ. ಇವರು ಇಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಕಳೆದ 15 ದಿನಗಳಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಯಲ್ಲಪ್ಪ ಕದ್ರಳ್ಳಿ ಕಳೆದ 38 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ PSI ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
