‘ಪೊಲೀಸರು ಅತ್ಯಂತ ಪ್ರಾಮಾಣಿಕರು ! ನಿಮ್ಮ ಬಳಿ ದುಡ್ಡು ತೆಗೆದುಕೊಂಡರೆ ನಿಮ್ಮ ಕೆಲಸ ಆಯಿತು ಎಂದು ಅರ್ಥ’

Prasthutha|

►‘ಪೊಲೀಸ್ ಕಾ ಪಾಠಶಾಲಾ’ ಕಾರ್ಯಕ್ರಮದಲ್ಲಿ UP ಪೊಲೀಸ್ ಅಧಿಕಾರಿಯ ಮಾತು
ಉನ್ನವೊ:
ಜನಸಾಮಾನ್ಯರಿಂದ ಲಂಚ ತೆಗೆದುಕೊಳ್ಳುವುದನ್ನು ಸಮರ್ಥಿಸುವ ಪೊಲೀಸ್ ಅಧಿಕಾರಿಯೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಉನ್ನವೊ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಪೊಲೀಸ್ ಕಿ ಪಾಠಶಾಲ’ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಆಡಿರುವ ಮಾತು ಹೀಗಿದೆ

- Advertisement -


‘ಪೊಲೀಸರಷ್ಟು ಪ್ರಾಮಾಣಿಕ ವ್ಯಕ್ತಿಗಳು ಬೇರೆ ಯಾವ ಇಲಾಖೆಗಳಲ್ಲೂ ಇಲ್ಲ. ಪೊಲೀಸರು ನಿಮ್ಮ ಬಳಿ ದುಡ್ಡು ತೆಗೆದುಕೊಂಡರೆ ನಿಮ್ಮ ಕೆಲಸ ಆಯಿತು ಎಂದು ಅರ್ಥ. ಆದರೆ ಬೇರೆ ಇಲಾಖೆಗಳಲ್ಲಿ ನಿಮ್ಮ ಕೆಲಸ ಮಾಡಿಕೊಡುವುದಾಗಿ ದುಡ್ಡು ತೆಗೆದುಕೊಳ್ಳುತ್ತಾರೆ. ಬಳಿಕ ನಿಮಗೆ ಮೋಸ ಮಾಡುತ್ತಾರೆ. ಆದರೆ ಪೊಲೀಸರು ಹಾಗೆ ಮಾಡುವುದಿಲ್ಲ. ಅವರು ಪ್ರಾಮಾಣಿಕರು. ನಿಮ್ಮ ಅಧ್ಯಾಪಕರನ್ನು ನೋಡಿ, ಅವರು ಮನೆಯಲ್ಲಿ ಕುಳಿತು ಪಾಠ ಮಾಡುತ್ತಾರೆ. ಆದರೆ ನಾವು ಕೊರೋನಾ ವೈರಸ್ ಭೀತಿಯ ನಡುವೆಯೂ ಇಲ್ಲಿದ್ದೇವೆ, ಉಳಿದ ಸಮಯಕ್ಕಿಂತ ಹೆಚ್ಚಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿ ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಪಿಯೂಷ್ ರೈ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಕೆಳಗಡೆ ಪ್ರತಿಕ್ರಿಯಿಸಿರುವ ಉನ್ನವೊ ಪೊಲೀಸ್, ಘಟನೆ ಕುರಿತಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರಿದ್ದಾರೆ ಎಂದು ಪ್ರತಿಕ್ರಿಯಿಸಿದೆ.



Join Whatsapp