ಪ್ರತಿಭಟನಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್: SDPI ಖಂಡನೆ

Prasthutha|

ಉಡುಪಿ: ಎನ್ ಐಎ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರ ಮೇಲೆ ಉಡುಪಿ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದನ್ನು ಎಸ್ ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ  ಬಿ. ಎನ್. ಶಾಹಿದ್ ಅಲಿ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿನ್ನೆ ಜನಪರ ಸಾಮಾಜಿಕ ಸಂಘಟನೆ PFI ಕಚೇರಿ ಹಾಗೂ ನಾಯಕರ  ಮನೆ ಮೇಲೆ ರಾತ್ರೋ ರಾತ್ರಿ ಅಕ್ರಮವಾಗಿ ನಡೆದ ದಾಳಿ ಹಾಗೂ ಬಂಧನ ಒಂದು ರಾಜಕೀಯ ಪ್ರೇರಿತ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ. NIA ಯಂತಹ  ಸಾಂವಿಧಾನಿಕ ಸಂಸ್ಥೆ ಗಳ ದುರುಪಯೋಗ ಮತ್ತು PFI ಸಂಘಟನೆಯ ನಾಯಕರ ಅನ್ಯಾಯದ ಬಂಧನವನ್ನು ವಿರೋಧಿಸಿ ದೇಶಾದ್ಯಂತ ನಿನ್ನೆ ಪ್ರತಿಭಟನೆ ನಡೆಯಿತು. ಅಸಾಂವಿಧಾನಿಕ ಬಂಧನವನ್ನು ವಿರೋಧಿಸುವುದು ನಮ್ಮ ಸಾಂವಿಧಾನಿಕ ಹಕ್ಕು. ಅದರ ಭಾಗವಾಗಿ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ PFI ಕಾರ್ಯಕರ್ತರ ಮೇಲೆ ಪೊಲೀಸರು ಯಾವುದೇ ಮುನ್ಸೂಚನೆ ನೀಡದೆ ಲಾಠಿ ಬೀಸಿದ್ದು ಹಾಗೂ “ಅವರಿಗೆ ಹೊಡೆಯಿರಿ, ಹೊಡೆಯಿರಿ” ಎಂದು ಪ್ರಚೋದನಾತ್ಮಕವಾಗಿ ಕೂಗಿದ ಕ್ರಮ  ಪೊಲೀಸರ ಆಶಿಸ್ತು ಹಾಗೂ ದರ್ಪವನ್ನು ತೋರಿಸುತ್ತದೆ. ಪೊಲೀಸರ ಇಂತಹ ನಡೆಯನ್ನು ಉಡುಪಿ ಜಿಲ್ಲಾ SDPI  ಬಲವಾಗಿ ವಿರೋಧಿಸುತ್ತಾ ಇದನ್ನು ಖಂಡಿಸುತ್ತದೆ. ಪೊಲೀಸ್ ವರಿಷ್ಟಾಧಿಕಾರಿಗಳು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಬಿ. ಎನ್. ಶಾಹಿದ್ ಅಲಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp