NIA ದಾಳಿ ವಿರೋಧಿಸಿ ರಾಜ್ಯದೆಲ್ಲೆಡೆ PFI ಮಾನವ ಸರಪಳಿ

Prasthutha|

ಬೆಂಗಳೂರು: ದೇಶದೆಲ್ಲೆಡೆ PFI ಅನ್ನು ಗುರಿಯಾಗಿಸಿ NIA ನಡೆಸಿದ ದಾಳಿಯನ್ನು ಖಂಡಿಸಿ ಶುಕ್ರವಾರ ರಾಜ್ಯದೆಲ್ಲೆಡೆ ಮಾನವ ಸರಪಳಿ ಮತ್ತು ಭಿತ್ತಿಪತ್ರ ಪ್ರದರ್ಶನ ನಡೆಯಿತು.

- Advertisement -

ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಸೂಚಿಸಿದ ಸುಳ್ಳು ಆರೋಪ ಹೊರಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್.ಡಿ.ಪಿ.ಐ ಕಚೇರಿಗಳ ಮತ್ತು ನಾಯಕರ ಮನೆಗಳನ್ನು ದಾಳಿ ನಡೆಸಿ, ಹಲವು ನಾಯಕರನ್ನು ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ಶುಕ್ರವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಜುಮಾ ನಮಾಝಿನ ಬಳಿಕ ಮಸೀದಿಗಳ ಮುಂಭಾಗ ವಿಸ್ಟ್ಯಾಂಡ್ ವಿತ್ ಪಿಎಫ್ಐ ಎಂಬ ಭಿತ್ತಿಪತ್ರ ಪ್ರದರ್ಶಿಸಿದರೆ, ಇನ್ನು ಕೆಲವೆಡೆ ಮಾನವ ಸರಪಳಿ ನಿರ್ಮಿಸಿ ಪಿಎಫ್ಐಗೆ ಬೆಂಬಲ ಸೂಚಿಸಿದರು.

Join Whatsapp